ADVERTISEMENT

ಹುಬ್ಬಳ್ಳಿ: ಅಬಕಾರಿ ಇಲಾಖೆಯಿಂದ ಜನಜಾಗೃತಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 15:30 IST
Last Updated 16 ಜುಲೈ 2020, 15:30 IST
ಕುಂದಗೋಳದಲ್ಲಿ ಗುರುವಾರ ಅಬಕಾರಿ ಇಲಾಖೆ ಅಧಿಕಾರಿಗಳು ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸಿದರು
ಕುಂದಗೋಳದಲ್ಲಿ ಗುರುವಾರ ಅಬಕಾರಿ ಇಲಾಖೆ ಅಧಿಕಾರಿಗಳು ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸಿದರು   

ಹುಬ್ಬಳ್ಳಿ: ಜಿಲ್ಲೆಯಲ್ಲಿ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗದ ಕುರಿತು ಮಾಹಿತಿ ನೀಡಲು ಅಬಕಾರಿ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಗುರುವಾರ ಜನಜಾಗೃತಿ ಹಮ್ಮಿಕೊಳ್ಳಲಾಗಿತ್ತು.

ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ ತಾಲ್ಲೂಕುಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಮುಖ ಬಡಾವಣೆಗಳು ಮತ್ತು ವ್ಯಾಪಾರಿಗಳ ಬಳಿ ತೆರಳಿ ಜಾಗೃತಿ ಮೂಡಿಸಿದರು. ಸೋಂಕು ಹರಡುವುದನ್ನು ತಪ್ಪಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಅಗತ್ಯ. ಎಲ್ಲೆಂದರಲ್ಲಿ ಉಗುಳುವುದನ್ನು ಬಿಡಬೇಕು, ಗುಂಪು ಸೇರಬಾರದು’ ಎಂದು ಜಾಗೃತಿ ಮೂಡಿದರು.

ನೂಲ್ವಿ ಗ್ರಾಮದ ಕೆ.ಬಿ.ಡಿ. ಡಿಸ್ಟಲರಿ ಫ್ಯಾಕ್ಟರಿಗೆ ಭೇಟಿ ನೀಡಿದ ಅಬಕಾರಿ ಉಪಆಯುಕ್ತ ಶಿವನಗೌಡರ ನೇತೃತ್ವದ ತಂಡ, ಕಾರ್ಖಾನೆಯಲ್ಲಿ ಸ್ಯಾನಿಟೈಸರ್, ಮಾಸ್ಕ್ ಬಳಕೆ, ಥರ್ಮಲ್ ಸ್ಟ್ರೀನಿಂಗ್‌, ಪಲ್ಸ್ ಆಕ್ಸಿಮೀಟರ್ ಉಪಯೋಗಿಸುವ ಕುರಿತು ಪರಿಶೀಲಿಸಿದರು. ಸುರಕ್ಷತೆಗೆ ಒತ್ತು ಕೊಡುವಂತೆ ಕಾರ್ಮಿಕರಿಗೆ ತಿಳಿ ಹೇಳಿದರು.

ADVERTISEMENT

ಧಾರವಾಡದಲ್ಲಿ ಅಬಕಾರಿ ಉಪನಿರೀಕ್ಷಕ ಎಸ್.ಎಸ್. ಮುಜಾವರ್, ಹುಬ್ಬಳ್ಳಿಯಲ್ಲಿ ಶ್ರೀಶೈಲ ಸಂಗೊಳ್ಳಿ, ನವಲಗುಂದದಲ್ಲಿ ಟಿ.ಜೆ. ಗುಂಜೀಕರ, ಕುಂದಗೋಳದಲ್ಲಿ ಪ್ರೇಮಸಿಂಗ್ ಲಮಾಣಿ, ಕಲಘಟಗಿಯಲ್ಲಿ ಜಿ.ಬಿ.ಗುಲೆ ನೇತೃತ್ವದಲ್ಲಿ ಜನಜಾಗೃತಿ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.