ADVERTISEMENT

ಫೆ.8ರಂದು ಬಸವ ದಳ ರಾಷ್ಟ್ರೀಯ ಅಧಿವೇಶನ: ಕೆ.ವಿ.ವೀರೇಶ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 17:08 IST
Last Updated 12 ಜನವರಿ 2026, 17:08 IST
<div class="paragraphs"><p>ಸಾಂದರ್ಭಿಕ-ಚಿತ್ರ</p></div>

ಸಾಂದರ್ಭಿಕ-ಚಿತ್ರ

   

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ರಾಷ್ಟ್ರೀಯ ಬಸವ ದಳ ಸಂಘಟನೆಯ ರಾಷ್ಟ್ರೀಯ ಅಧಿವೇಶನವು‌ ಫೆ.8ರಂದು ಬೆಂಗಳೂರಿನ ಕುಂಬಳಗೋಡು ಬಸವ ಗಂಗೋತ್ರಿ ಆಶ್ರಮದಲ್ಲಿ ನಡೆಯಲಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ವಿ.ವೀರೇಶ ಸೋಮವಾರ ತಿಳಿಸಿದರು. 

ಬಸವ ಧರ್ಮ ಪೀಠದಲ್ಲಿ ನಡೆದ 39ನೇ ಶರಣ ಮೇಳದ ಕಾರ್ಯಕ್ರಮದಲ್ಲಿ ಅವರು, ‘ಬಸವ ದಳದ ಸಂಘಟನೆ, ವೀರಶೈವ, ಹಿಂದೂ ಪದಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು’ ಎಂದು ಹೇಳಿದರು. 

ADVERTISEMENT

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ‘ಈ ವರ್ಷ ರಾಜ್ಯದ 12 ಜಿಲ್ಲೆಗಳಲ್ಲಿ ‘ನಾನು ಲಿಂಗಾಯತ’ ಅಭಿಯಾನ ಮಾಡುವ ಮೂಲಕ ಲಿಂಗಾಯತ ಧರ್ಮ ಸಂಘಟನೆ, ಜಾಗೃತಿ ಮಾಡಲಾಗುವುದು’ ಎಂದರು.

ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಮಾತನಾಡಿ, ‘ ರಾಷ್ಟ್ರೀಯ ಬಸವ ದಳ ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದೆ. ದೇಶದ 10 ರಾಜ್ಯಗಳಲ್ಲಿ ಸಂಘಟನೆ ಇದ್ದು, ವಿಸ್ತರಿಸುವ ಉದ್ದೇಶವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.