ADVERTISEMENT

ಶ್ರೀಧರ ಗಸ್ತಿ ಸಾಹಿತ್ಯ; ಬದುಕಿನ ಸತ್ಯ: ಲೇಖಕ ಬಸು ಬೇವಿನಗಿಡದ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 7:08 IST
Last Updated 16 ಫೆಬ್ರುವರಿ 2026, 7:08 IST
ಧಾರವಾಡದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀಧರ ಗಸ್ತಿ ಅವರು `ದಿ ಕಪ್‍ಟಿಚ್ಡ ಬೈ ದೇವಮ್ಮ', `ಎಳೆಬಾಳೆ ಸುಳಿ ನಾನವ್ವ' ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು 
ಧಾರವಾಡದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀಧರ ಗಸ್ತಿ ಅವರು `ದಿ ಕಪ್‍ಟಿಚ್ಡ ಬೈ ದೇವಮ್ಮ', `ಎಳೆಬಾಳೆ ಸುಳಿ ನಾನವ್ವ' ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು    

ಧಾರವಾಡ: ಶ್ರೀಧರ ಗಸ್ತಿ ಅವರು ರಚಿಸಿದ ಮಕ್ಕಳ ಸಾಹಿತ್ಯ ಕೃತಿಗಳು ಶಾಲಾ ಜೀವನದ ವಾಸ್ತವಿಕ ಅನುಭವಗಳ ಸಾರವಾಗಿವೆ ಎಂದು ಲೇಖಕ ಬಸು ಬೇವಿನಗಿಡದ ಹೇಳಿದರು.

ಚಿಲಿಪಿಲಿ ಪ್ರಕಾಶನ ವತಿಯಿಂದ ರಾ.ಹ ದೇಶಪಾಂಡೆ ಸಭಾಂಗಣದಲ್ಲಿ ಈಚೆಗೆ ನಡೆದ ಸಾಹಿತಿ ಶ್ರೀಧರ ಗಸ್ತಿ ಅವರ `ದಿ ಕಪ್‍ಟಿಚ್ಡ ಬೈ ದೇವಮ್ಮ' ಹಾಗೂ `ಎಳೆಬಾಳೆ ಸುಳಿ ನಾನವ್ವ' ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ‘ಶ್ರೀಧರ ಗಸ್ತಿ ಅವರ ಸಾಹಿತ್ಯದಲ್ಲಿ ಬದುಕಿನ ಸತ್ಯಗಳಿವೆ. ಆಧುನಿಕತೆಯ ವಾಸ್ತವಿದ ಕಥೆಗಳಿವೆ’ ಎಂದರು.

ರಂಗಕರ್ಮಿ ಝಾಕಿರ್‌ ನದಾಫ್ `ಎಳೆಬಾಳೆ ಸುಳಿನಾನವ್ವ' ಕೃತಿ ಕುರಿತು ಮಾತನಾಡಿ, ಮಕ್ಕಳ ನಾಟಕ ಬರೆಯುವುದು ಪ್ರಯಾಸದಾಯಕ. ಮಕ್ಕಳ ಮನಸ್ಥಿತಿ, ಭಾವನೆ ಅರಿತು ನಾಟಕ ರಚಿಸಬೇಕಾಗುತ್ತದೆ. ಬಾಲ್ಯವಿವಾಹಂಥ ಸಾಮಾಜಿಕ ಅನಿಷ್ಟಗಳ ಕುರಿತು ನಾಟಕ ರಚಿಸಿ ಸಮಾಜ ಪರಿವರ್ತನೆಗೆ ಪ್ರಯತ್ನಿಸಿದ್ದಾರೆ’ ಎಂದು ಹೇಳಿದರು.

ADVERTISEMENT

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಸಿದ್ಧರಾಮ ಹಿಪ್ಪರಗಿ, ವೈ.ಜಿ.ಭಗವತಿ, ಶ್ರೀಧರ ಗಸ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.