ADVERTISEMENT

ಹೈಕೋರ್ಟ್ ಧಾರವಾಡ ಪೀಠ: ಹಿರೇಮಠ ವಕೀಲರ ಸಂಘದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 6:21 IST
Last Updated 13 ಡಿಸೆಂಬರ್ 2025, 6:21 IST
ಬಿ.ಡಿ.ಹಿರೇಮಠ
ಬಿ.ಡಿ.ಹಿರೇಮಠ   

ಧಾರವಾಡ: ಹೈಕೋರ್ಟ್ ಧಾರವಾಡ ಪೀಠದ ವಕೀಲರ ಸಂಘದ ಅಧ್ಯಕ್ಷರಾಗಿ ಬಿ.ಡಿ.ಹಿರೇಮಠ ಆಯ್ಕೆಯಾಗಿದ್ಧಾರೆ.

ಸಂಘದ ಪದಾಧಿಕಾರಿಗಳ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಿತು. ಉಪಾಧ್ಯಕ್ಷರಾಗಿ ಶ್ರೀಹರ್ಷ ನಿಲೋಪಂತ್‌, ಪ್ರಧಾನ ಕಾರ್ಯದರ್ಶಿಯಾಗಿ ಎ.ಎಂ.ಮಾಲಿಪಾಟೀಲ, ಜಂಟಿ ಕಾರ್ಯದರ್ಶಿಯಾಗಿ ರಾಮ್‌ ಘೋರ್ಪಡೆ, ಖಜಾಂಚಿಯಾಗಿ ಜೋಸ್ನಾ ದಾನ್ವೆ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಕರ್ಷ್‌ ಮಿತ್ತಲಕೋಡ, ಅಶೋಕ ಸಿ.ಅಂಗಡಿ, ಅಭಿನಂದನ್‌ ಹಿರೇಮಠ, ಕುಶಾ‌ಲ್‌ ಕಾಂಬ್ಳೆ ಆಯ್ಕೆಯಾಗಿದ್ದಾರೆ. ಸಂಜನಾ ಮುಧೋಳ (ಮಹಿಳಾ ಪ್ರತಿನಿಧಿ ಸ್ಥಾನ) ಹಾಗೂ ಕಾವ್ಯಾ ಸಿ (ಮಹಿಳಾ ಮೀಸಲು ಸ್ಥಾನ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ಚುನಾವಣಾಧಿಕಾರಿಯಾಗಿ ಎಸ್‌.ಕೆ.ಕಾಯಕಮಠ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಆರ್‌.ಎಚ್‌.ಅಂಗಡಿ ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.