
ಗುಡಗೇರಿ: ಗ್ರಾಮದಲ್ಲಿ ನಡೆಯುತ್ತಿರುವ ಪಂಚ ಕಲ್ಯಾಣ ಮಹೋತ್ಸವದಲ್ಲಿ ಬುಧವಾರ ರಾಜ್ಯ ವೈಭವವನ್ನು ತ್ಯಜಿಸಿ, ವೈರಾಗ್ಯ ಮನೋಭಾವದಿಂದ ದೀಕ್ಷೆ ಪಡೆಯುವ ಸನ್ನಿವೇಶದ ವಿಧಿ ವಿಧಾನಗಳು ಜರುಗಿದವು. ದೀಕ್ಷಾಕ್ಷರಗಳನ್ನು ನಟನೆಯ ಮೂಲಕ ಪ್ರದರ್ಶಿಸಲಾಯಿತು.
108 ಶ್ರೀ ಪುಣ್ಯಸಾಗರ ಮುನಿ ಮಹಾರಾಜರು ಆಶೀರ್ವಚನ ನೀಡಿ, ‘ಜೈನ ಧರ್ಮದಲ್ಲಿ ವೈರಾಗ್ಯ ದೀಕ್ಷೆ ಪಡೆದು ಆತ್ಮಕಲ್ಯಾಣ ಮಾಡಿಕೊಳ್ಳುತ್ತ ಬಂದಿದ್ದು, 24 ತೀರ್ಥಂಕರರು ಬೋಧಿಸಿದ ತತ್ವಗಳನ್ನು ಆಚರಣೆ ಮಾಡುವ ಮೂಲಕ ಶ್ರಾವಕರು ಆತ್ಮಕಲ್ಯಾಣ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಸಿಂಹನಗದ್ದೆ ಶ್ರೀ ಲಕ್ಷ್ಮಿಸೇನ ಭಟ್ಟಾರಕರು, ಕೊಲ್ಹಾಪುರದ ಲಕ್ಷ್ಮೀಸೇನ ಭಟ್ಟಾರಕರು, ವರೂರ ಧರ್ಮಸೇನಾ ಭಟ್ಟಾರಕರ ನೇತೃತ್ವದಲ್ಲಿ ರಾಜ್ಯಾಭಿಷೇಕ ಹಾಗೂ ದೀಕ್ಷಾ ಕಲ್ಯಾಣಿಕ ವಿಧಾನಗಳು ನೆರವೇರಿದವು.
ಕೊಲ್ಹಾಪುರದ ಲಕ್ಷ್ಮಿಸೇನ ಭಟ್ಟಾರಕರ 33ನೇ ಜನ್ಮದಿನಾಚರಣೆ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.