
ಪ್ರಜಾವಾಣಿ ವಾರ್ತೆ
ಸಾವು (ಪ್ರಾತಿನಿಧಿಕ ಚಿತ್ರ)
ನವಲಗುಂದ: ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಗೊಬ್ಬರಗುಂಪಿ ಕ್ರಾಸ್ ಸಮೀಪ ದ್ವಿಚಕ್ರ ವಾಹನ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಬೆಳಗಿನ ಸಮಯದಲ್ಲಿ ನಡೆದಿದೆ.
ಶಿವನಗೌಡ ವಿರೂಪಾಕ್ಷಗೌಡ ತೀರಕನಗೌಡ್ರ (48) ಮೃತ ದುರ್ದೈವಿ. ಇತನು ತನ್ನ ಸ್ವಗ್ರಾಮ ಹುಬ್ಬಳ್ಳಿಯಿಂದ ಬಾದಾಮಿ ತಾಲ್ಲೂಕಿನ ಗೋಪನಕೊಪ್ಪಕ್ಕೆ ಹೋಗುವ ವೇಳೆ ಈ ಘಟನೆ ಜರುಗಿದೆ.
ಯಾವ ವಾಹನದಿಂದ ಅಪಘಾತವಾಗಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಈ ಕುರಿತು ಶಿವನಗೌಡನ ಪತ್ನಿ ಶ್ರೀದೇವಿ ತೀರಕನಗೌಡ್ರ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.