ADVERTISEMENT

ವಿಶ್ವ ಹೃದಯ ದಿನ: ಎಸ್‍ಡಿಎಂ ಬೈಕಥಾನ್

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:03 IST
Last Updated 30 ಸೆಪ್ಟೆಂಬರ್ 2025, 6:03 IST
ಧಾರವಾಡದ ಎಸ್‍ಡಿಎಂ ನಾರಾಯಣ ಹೃದಯಾಲಯ ವತಿಯಿಂದ ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಬೈಕಥಾನ್ ಜರುಗಿತು 
ಧಾರವಾಡದ ಎಸ್‍ಡಿಎಂ ನಾರಾಯಣ ಹೃದಯಾಲಯ ವತಿಯಿಂದ ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಬೈಕಥಾನ್ ಜರುಗಿತು    

ಧಾರವಾಡ: ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಎಸ್‍ಡಿಎಂ ನಾರಾಯಣ ಹೃದಯಾಲಯ ವತಿಯಿಂದ ಭಾನುವಾರ ಆಯೋಜಿಸಿದ್ದ ಬೈಕಥಾನ್‍ಗೆ ಎಸ್‍ಡಿಎಂ ಮಹಾವಿದ್ಯಾಲಯ ಆವರಣದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ಮತ್ತು ಹುಬ್ಬಳ್ಳಿ ಗ್ರಾಮಾಂತರ ಠಾಣೆಯ ಇನ್‍ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ ಚಾಲನೆ ನೀಡಿದರು.

ಜಾಥಾವು ಎಸ್‍ಡಿಎಂ ಮಹಾವಿದ್ಯಾಲಯ, ಪಿ.ಬಿ.ರಸ್ತೆ, ಕೋರ್ಟ್ ವೃತ್ತ, ಜುಬಿಲಿ ವೃತ್ತ ಮಾರ್ಗವಾಗಿ ಕೆಸಿಡಿ ಕಾಲೇಜಿಗೆ ಆಗಮಿಸಿ ಸಂಪನ್ನಗೊಂಡಿತು.

ಜಾಥಾದಲ್ಲಿ ‘ಹೃದಯ ಆರೋಗ್ಯ’ ಹಾಗೂ ‘ಹೃದಯಾಘಾತ ತಡೆಗಟ್ಟುವಿಕೆ’ ಕುರಿತು ಜಾಗೃತಿ ಮೂಡಿಸಲಾಯಿತು. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಬೈಕರ್ ಗುಂಪುಗಳು, ಸಾರ್ವಜನಿಕ ಗುಂಪುಗಳು, ಆರೋಗ್ಯ ಪ್ರೇಮಿಗಳು ಹಾಗೂ ಸ್ಥಳೀಯ ನಾಗರಿಕರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಸಮಾರೋಪ ಕಾರ್ಯಕ್ರಮದಲ್ಲಿ ಹೃದಯ ರೋಗ ತಜ್ಞ ರಘು ಪ್ರಸಾದ ಮಾತನಾಡಿ, ‘ಆರೋಗ್ಯದ ಕಾಳಜಿ ವಹಿಸುವುದು ಸೂಕ್ತ. ಅದರ ಜೊತೆ ನಿಯಮಿತವಾಗಿ ತಪಾಸಣೆ ಮಾಡಿಸಬೇಕು’ ಎಂದು ಸಲಹೆ ನೀಡಿದರು.

ಅರವಳಿಕೆ ತಜ್ಞ ಗಣೇಶ ನಾಯಕ್, ಪ್ರತಿಯೊಬ್ಬರ ಜೀವನಶೈಲಿ ಚೆನ್ನಾಗಿರಬೇಕು, ಪ್ರತಿನಿತ್ಯ ಯೋಗ ವ್ಯಾಯಾಮದಂತಹ ಚಟುವಟಿಕೆಯಲ್ಲಿ ನಿರತವಾಗಿರಬೇಕು ಎಂದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್ ಪಟ್ಟಣಶೆಟ್ಟಿ,ವೈದ್ಯಕೀಯ ವರಿಷ್ಠಾಧಿಕಾರಿ ಡಾ.ಕೀರ್ತಿ ಪಿ.ಎಲ್, ಜಿ.ವಿ ರಾಮನಗೌಡ, ದುಂಡೇಶ ತಡಕೋಡ ಅಜೇಯ ಹುಲಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.