ADVERTISEMENT

ಅಂಧರ ಕ್ರಿಕೆಟ್‌; ಕರ್ನಾಟಕ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 0:29 IST
Last Updated 23 ಡಿಸೆಂಬರ್ 2025, 0:29 IST
ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಸೋಮವಾರ ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳ ನಡುವೆ ಟಿ20 ಕ್ರಿಕೆಟ್‌ ಪಂದ್ಯ ನಡೆಯಿತು
ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಸೋಮವಾರ ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳ ನಡುವೆ ಟಿ20 ಕ್ರಿಕೆಟ್‌ ಪಂದ್ಯ ನಡೆಯಿತು   

ಹುಬ್ಬಳ್ಳಿ: ಭಾಸ್ಕರ್‌ ಅವರ ಅರ್ಧಶತಕದ ಬಲದಿಂದ ಕರ್ನಾಟಕ ತಂಡವು ಇಂಡಸ್‌ ಇಂಡ್‌ ಬ್ಯಾಂಕ್‌ ‘ನಾಗೇಶ್‌ ಟ್ರೋಫಿ’ ಅಂಧರ ರಾಷ್ಟ್ರಮಟ್ಟದ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿತು.

ಇಲ್ಲಿನ ರೈಲ್ವೆ ಮೈದಾನದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಭಾರತ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ವತಿಯಿಂದ ಸೋಮವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮಹಾರಾಷ್ಟ್ರ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 146 ರನ್ ಗಳಿಸಿತು. ಕರ್ನಾಟಕ ತಂಡವು 11.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 148 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಆರಂಭಿಕ ಆಟಗಾರ ಭಾಸ್ಕರ್‌ 46 ಎಸೆತಗಳಲ್ಲಿ 86 ರನ್‌ (4X15) ರನ್‌ ಗಳಿಸಿದರು. ಅವರಿಗೆ ರವಿ ಬಂಡಿವಡ್ಡರ್‌ 32 (22ಎ, 4X6) ಉತ್ತಮ ಜತೆ ನೀಡಿದರು.

ADVERTISEMENT

ಕರ್ನಾಟಕ ತಂಡದ ಸುನಿಲ್ ರಮೇಶ್‌ (17ಕ್ಕೆ 2) ಅವರ ಬಿಗಿ ಬೌಲಿಂಗ್‌ನಿಂದಾಗಿ ಮಹಾರಾಷ್ಟ್ರ ತಂಡಕ್ಕೆ ಬೃಹತ್‌ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಅನಿಲ್‌ ಬೆಲ್ಸಾರೆ 70 (58 ಎ, 4X7) ಅವರು ತಾಳ್ಮೆಯ ಆಟವಾಡಿ ತಂಡವು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು.

ಇನ್ನೊಂದು ಪಂದ್ಯದಲ್ಲಿ ಕೇರಳ ತಂಡವು 10 ರನ್‌ಗಳಿಂದ ಹಿಮಾಚಲ ಪ್ರದೇಶ ತಂಡದ ಎದುರು ಜಯಿಸಿತು. ಟೂರ್ನಿಯಲ್ಲಿ ರಾಜಸ್ಥಾನ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕ ತಂಡಗಳು ಭಾಗವಹಿಸಿವೆ.

ಸಂಕ್ಷಿಪ್ತ ಸ್ಕೋರು: ಮಹಾರಾಷ್ಟ್ರ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 146 (ಅನಿಲ್‌ ಬೆಲ್ಸಾರೆ 70, ಅಶುತೋಷ್‌ 16; ಸುನಿಲ್‌ ರಮೇಶ್‌ 17ಕ್ಕೆ 2). ಕರ್ನಾಟಕ: 11.3 ಓವರ್‌ಗಳಲ್ಲಿ 2ಕ್ಕೆ 148 (ಭಾಸ್ಕರ್‌ 86, ರವಿ ಬಂಡಿವಡ್ಡರ್‌ 32). ಪಂದ್ಯಶ್ರೇಷ್ಠ: ಭಾಸ್ಕರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.