ADVERTISEMENT

ಶಿರಹಟ್ಟಿ: ಶಾಲೆಗೆ ಸಾಹಿತ್ಯ ಕೃತಿಗಳ ದೇಣಿಗೆ

​ಪ್ರಜಾವಾಣಿ ವಾರ್ತೆ
Published 4 ಮೇ 2023, 6:24 IST
Last Updated 4 ಮೇ 2023, 6:24 IST

ಹುಬ್ಬಳ್ಳಿ: ಸಾಹಿತಿ ಕೃಷ್ಣಮೂರ್ತಿ ಕುಲಕರ್ಣಿ ಅವರು ತಮ್ಮ ಪತ್ನಿ ದಿ. ಜಯಾಕೃಷ್ಣಮೂರ್ತಿ ಸ್ಮರಣಾರ್ಥ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳು ಸೇರಿದಂತೆ ಕನ್ನಡ ಸಾಹಿತ್ಯದ ಒಂದು ಸಾವಿರ ಪುಸ್ತಕಗಳನ್ನು ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪದ ದ್ವಾರಕಾಮಠದ ಬಾಲಕಿಯರ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ.

ಅಲ್ಲದೆ, ಹಾವೇರಿ ಹಾಗೂ ಮಂಗಳೂರು ಕಾರಾಗೃಹಗಳಿಗೂ ಪುಸ್ತಕಗಳನ್ನು ನೀಡಿದ್ದಾರೆ. 

ವಿಶೇಷ ಸಲಹಾ ಶಿಬಿರ ಇಂದಿನಿಂದ

ADVERTISEMENT

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಮೇ 4ರಿಂದ 6ರವರೆಗೆ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಎಲ್ಲ  ವಯಸ್ಸಿನವರಲ್ಲಿ ಕಂಡು ಬರುವ ಬೆನ್ನಿನಿಂದ ಕಾಲಿನ ಬೆರಳುಗಳವರೆಗೆ ನೋವು ಕಾಣಿಸಿಕೊಳ್ಳುವುದು, ನಡೆಯಲು ತೊಂದರೆ ಸೇರಿ ಇನ್ನಿತರ ಕಾಯಿಲೆಗಳಿಗೆ ಶಲ್ಯತಂತ್ರ ವಿಭಾಗದ ವತಿಯಿಂದ ವಿಶೇಷ ಸಲಹಾ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.

ಮಾಹಿತಿಗೆ ಸಹಪ್ರಾದ್ಯಾಪಕ ಡಾ.ಚಂದ್ರಭೂಷಣ ಸಿನ್ಹಾ (97310 46618), ಡಾ. ಭಾವನಾ ಶಾಬಳದ (86182 78957) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.