ADVERTISEMENT

ಹುಬ್ಬಳ್ಳಿ | ರಂಗ ರೇಖಾ ಕಲಾ ಬಳಗದಿಂದ ‘ಬ್ರಹ್ಮನ ಸೋಲು’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 3:05 IST
Last Updated 7 ಅಕ್ಟೋಬರ್ 2025, 3:05 IST
ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರು ಬ್ರಹ್ಮನ ಸೋಲು ನಾಟಕ ಪ್ರದರ್ಶಿಸಿದರು
ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರು ಬ್ರಹ್ಮನ ಸೋಲು ನಾಟಕ ಪ್ರದರ್ಶಿಸಿದರು   

ಹುಬ್ಬಳ್ಳಿ: ರಂಗ ರೇಖಾ ಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರಾಣಿಗಳ ದಿನಾಚರಣೆ ಕಾರ್ಯಕ್ರಮ ನಗರದ ಸವಾಯಿ ಗಂದರ್ವ ಕಲಾ ಮಂದಿರದಲ್ಲಿ ಭಾನುವಾರ ಜರುಗಿತು.

ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅರಣ್ಯಾಧಿಕಾರಿ ಖೇಮಚಂದ ರಾಥೋಡ, ಪ್ರಾಣಿಗಳು ಮತ್ತು ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಸಾಹಿತಿ ಆರ್.ಎಂ.ಗೊಗೇರಿ ಮಾತನಾಡಿ, ವಿಶ್ವ ಪ್ರಾಣಿಗಳ ದಿನಾಚರಣೆ ಪ್ರಯುಕ್ತ ರಂಗ ರೇಖಾ ಕಲಾ ಬಳಗ ವಿಭಿನ್ನ ಕಾರ್ಯಕ್ರಮ ಆಯೋಜಿಸಿರುವ ಕಾರ್ಯ ಶ್ಲಾಘನೀಯ. ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. 

ADVERTISEMENT

ಪ್ರಾಣಿ ರಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮುಕ್ತಿ ಚಿತ್ರ ಪ್ರದರ್ಶನ ನಡೆಯಿತು. ತುಕಾರಾಮ ಕಠಾರೆ, ಬದರಿನಾರಾಯಣ ಕೊರಲಳ್ಳಿ ಅವರು ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು.

ಸಾಹಿತಿ ಎಂ.ಡಿ.ಗೊಗೇರಿ ಅವರು ರಚಿಸಿ, ಸುಭಾಸ ಮೆಹರವಾಡೆ ನಿರ್ದೇಶಿಸಿದ ‘ಬ್ರಹ್ಮನ ಸೊಲು’ ನಾಟಕವನ್ನು ಕಲಾವಿದರು ಪ್ರದರ್ಶಿಸಿದರು.  ಅನ್ನಪೂರ್ಣ ಉಂಡಿ, ಗೌರಿ ಜಕರಡ್ಡಿ, ಶಕುಂತಲಾ ಬೀರಣ್ಣವರ, ಬಸವರಾಜ ಚಕ್ರಸಾಲಿ, ಸಂತೊಷ ಮಠದ, ದೀಪಕ ಚನ್ನಿಯವರ, ಫಕಿರೇಶ ಮುಗುಳಿ, ಶಿವಾನಂದ ದಾಸಪ್ಪನವರ, ಶಿವಣ್ಣ  ಪೆರೂರ, ಸುನಿಲ ಕಾಂಬಳೆ, ಲಕ್ಷ್ಮಣ ಸುಣಗಾರ, ಪ್ರಜ್ವಲ ಅನವಾಲ, ಚಂದ್ರು ಟೊಪಗಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು. ಮಂಜುನಾಥ ಇಂಗಳಳ್ಳಿ ಸಂಗೀತ ನೀಡಿದರು. 

ಯಲ್ಲಪ್ಪ ಜೊಡಳ್ಳಿ, ಸಂಗಮೇಶ ಚಕ್ರಸಾಲಿ, ಅಡಿವೆಪ್ಪ ತಳವಾರ, ರಾಮಣ್ಣ ಕಾಳೆ, ರಾಹುಲ್ ಕೊಠಾರಿ, ರಾಕೇಶ ಉಳ್ಳಿಗೆರಿ, ಪ್ರಕಾಶ ಚಿಗರಿ, ಸೌರಭ ಕಮ್ಮಾರ, ಪ್ರಕಾಶ ಮಾಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.