ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಪ್ರ ಸಮುದಾಯದ ಮುಖಂಡ ಸಾಗರ ಪುರೋಹಿತ ಮಾತನಾಡಿದರು. ವೈಶಾಲಿ ಪಾಟೀಲ, ವೆಂಕಟೇಶ, ಅಶೋಕ ಕುಲಕರ್ಣಿ, ಶಂಕರ ಪಾಟೀಲ, ರೂಪಾ ಗೋಡ್ಕಿಂಡಿ ಹಾಗೂ ಪ್ರಮುಖರು ಹಾಜರಿದ್ದರು
ಹುಬ್ಬಳ್ಳಿ: ಬೆಂಗಳೂರಿನ ವಿಪ್ರ ವ್ಯವಹಾರ ವೇದಿಕೆ ವತಿಯಿಂದ ಇಲ್ಲಿನ ವಿದ್ಯಾನಗರದ ಹನ್ಸ್ ಹೋಟೆಲ್ ಸಭಾಂಗಣದಲ್ಲಿ ಜುಲೈ 27ರಂದು ಬೆಳಿಗ್ಗೆ 10ಕ್ಕೆ ನಗರದ ‘ಅಗಸ್ತ್ಯ ವಾಹಿನಿ ಶಾಖೆ’ಯ ಮೊದಲ ವಾರ್ಷಿಕೋತ್ಸವ ಹಾಗೂ ‘ಬ್ರಾಹ್ಮಣ ವ್ಯವಹಾರ ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ಶಾಖೆಯ ನಿರ್ದೇಶಕ ಸಾಗರ್ ಪುರೋಹಿತ ತಿಳಿಸಿದರು.
’ಬ್ರಾಹ್ಮಣ ಸಮುದಾಯದವರಲ್ಲಿ ವ್ಯಾಪಾರ ಕೌಶಲ ಹೆಚ್ಚಿಸುವಲ್ಲಿ ಅಗತ್ಯ ತರಬೇತಿ, ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಸಮಾವೇಶದಲ್ಲಿ ಭಾಗವಹಿಸಲು ಬಾಗಲಕೋಟೆ, ಬೆಳಗಾವಿ ಹಾಗೂ ವಿಜಾಪುರ ಜಿಲ್ಲೆಗಳ ಸಣ್ಣ ಸಣ್ಣ ಉದ್ದಿಮೆದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ವಿಪ್ರ ವ್ಯವಹಾರ ವೇದಿಕೆ ಅಡಿಯಲ್ಲಿ ಅಗಸ್ತ್ಯ ವಾಹಿನಿ ಶಾಖೆಯು ಕಾರ್ಯ ನಿರ್ವಹಿಸುತ್ತಿದ್ದು, ಇದು ಸಹ ವಿಪ್ರ ಸಮುದಾಯದವರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದ್ದು, 60 ಜನ ಸದಸ್ಯರನ್ನು ಒಳಗೊಂಡಿದೆ. 100 ಸದಸ್ಯರನ್ನು ಮಾಡಲಾಗುವುದು. ಹೀಗಾಗಿ ’ನಮ್ಮ ನಡೆ ನೂರರ ಕಡೆ’ ಎಂಬ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ’ ಎಂದರು.
‘ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿನ ಬ್ರಾಹ್ಮಣ ಸಮುದಾಯದವರನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ‘ಅಗಸ್ತ್ಯ ವಾಹಿನಿ ಶಾಖೆ’ಯನ್ನು ತೆರೆಯುವ ಉದ್ದೇಶ ಹೊಂದಲಾಗಿದೆ’ ಎಂದರು.
ವೈಶಾಲಿ ಪಾಟೀಲ, ವೆಂಕಟೇಶ, ಅಶೋಕ ಕುಲಕರ್ಣಿ, ಶಂಕರ ಪಾಟೀಲ, ರೂಪಾ ಗೋಡ್ಕಿಂಡಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.