ಹುಬ್ಬಳ್ಳಿ: ತಾಂತ್ರಿಕ ಕಾರಣಗಳಿಂದಾಗಿ ಬೆಂಗಳೂರು– ಹುಬ್ಬಳ್ಳಿ (07353) ಹಾಗೂ ಹುಬ್ಬಳ್ಳಿ– ಬೆಂಗಳೂರು (07354) ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಜುಲೈ 16ರಿಂದ ರದ್ದುಗೊಳಿಸಲಾಗುತ್ತಿದೆ.
ಭಾಗಶಃ ರೈಲು ರದ್ದು: ಗುಂತಕಲ್ ವಿಭಾಗದಲ್ಲಿ ರೋಲಿಂಗ್ ಕಾರಿಡಾರ್ ಕಾಮಗಾರಿ ನಡೆಯುತ್ತಿರುವ ಕಾರಣ, ಹುಬ್ಬಳ್ಳಿ– ಗುಂತಕಲ್ (07337) ಹಾಗೂ ಗುಂತಕಲ್– ಹುಬ್ಬಳ್ಳಿ (07338) ಪ್ಯಾಸೆಂಜರ್ ರೈಲುಗಳನ್ನು ಜುಲೈ 8ರಿಂದ ಮುಂದಿನ ಆದೇಶದವರೆಗೆ ತೋರಣಗಲ್ಲು ಮತ್ತು ಗುಂತಕಲ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.