ಹುಬ್ಬಳ್ಳಿ: ಆಪರೇಷನ್ ಸಿಂಧೂರ ಮತ್ತು ಕೇಂದ್ರ ಸರ್ಕಾರದ ವಿಕಸಿತ ಭಾರತ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಹರಿಯಾಣ ರಾಜ್ಯದ ಪಾಣಿಪತ್‌ನಿಂದ ಸೈಕಲ್‌ನಲ್ಲಿ ‘ಚಾರ್‌ಧಾಮ್’ ಯಾತ್ರೆ ಹೊರಟ ದೀಪಕ್ ಶರ್ಮಾ ಅವರು ಭಾನುವಾರ ನಗರಕ್ಕೆ ತಲುಪಿದರು.
ಇಲ್ಲಿನ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ ‘ಹುಬ್ಬಳ್ಳಿ ಚಾ ಮಹಾರಾಜ’ ಗಣಪತಿ ಪೆಂಡಾಲ್ ಎದುರು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಅವರು ನಿರತರಾಗಿದ್ದರು.
ಮೇ 25ರಂದು ಆರಂಭಿಸಿರುವ ಯಾತ್ರೆಯನ್ನು ಅವರು ಆರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ. ಒಟ್ಟು 10 ಸಾವಿರ ಕಿ.ಮೀ. ಸಂಚರಿಸಲಿದ್ದು, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ ಮೂಲಕ ಸಾಗಿ ಕರ್ನಾಟಕಕ್ಕೆ ಬಂದಿದ್ದಾರೆ. ಮುಂದಿನ ಪ್ರಯಾಣ ಬೆಂಗಳೂರಿಗೆ. ಬದರಿನಾಥದಲ್ಲಿ ಯಾತ್ರೆ ಕೊನೆಗೊಳಿಸಲಿದೆ.
ವಿಕಸಿತ ಭಾರತ ಸಾಧನೆಗಾಗಿ ದೇಶದ ಜನತೆಗೆ ಒಂಬತ್ತು ಸಂಕಲ್ಪಗಳನ್ನು ಹಾಕಿಕೊಳ್ಳಲು ಯಾತ್ರೆಯಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಅವುಗಳೆಂದರೆ, ನೀರಿನ ಸಂರಕ್ಷಣೆ, ತಾಯಿಯ ಹೆಸರಲ್ಲಿ ಒಂದು ಸಸಿ ನೆಡುವುದು, ಸ್ವಚ್ಛತೆ, ವೋಕಲ್ ಫಾರ್ ಲೋಕಲ್, ದೇಶದ ದರ್ಶನ, ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವುದು, ಯೋಗ ಮತ್ತು ಕ್ರೀಡೆಯನ್ನು ಜೀವನದ ಭಾಗವಾಗಿ ಮಾಡಿಕೊಳ್ಳುವುದು, ಬಡಜನರಿಗೆ ಸಹಾಯ ಮಾಡುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.