ADVERTISEMENT

ಕಣವಿ ನಿಧನ: ಭಾರತೀಯ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ– ಚಿಂತಕ ಜಿ.ಎನ್. ದೇವಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 9:01 IST
Last Updated 16 ಫೆಬ್ರುವರಿ 2022, 9:01 IST
   

ಧಾರವಾಡ: ದಶಕಗಳ ಕಾಲ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಡಾ. ಚೆನ್ನವೀರ ಕಣವಿ ಅವರ ಸಾವು, ಕರ್ನಾಟಕಕ್ಕಷ್ಟೇ ಅಲ್ಲದೆ, ಭಾರತೀಯ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಚಿಂತಕ ಡಾ. ಜಿ.ಎನ್‌. ದೇವಿ ಹೇಳಿದರು.

ಇಲ್ಲಿನ ಕಲ್ಯಾಣನಗರದಲ್ಲಿ ಕಣವಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಣವಿ ಅವರ ಸಾಹಿತ್ಯ ಕೇವಲ‌ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರ ಸಾಹಿತ್ಯ ದೇಶದಾದ್ಯಂತ ಪಸರಿಸಿದೆ. ಸರ್ಕಾರ ಕಣವಿ ಅವರ ಸಾಹಿತ್ಯ ಕೊಡುಗೆಯನ್ನು ಪರಿಗಣಿಸಿ ಸೂಕ್ತ ಗೌರವ ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT