ADVERTISEMENT

ಧಾರವಾಡ|ಎಳನೀರು ವ್ಯಾಪಾರಿಗಳಿಗೆ ಧಮ್ಕಿ; ‘ಕೊಕಾ’ ಜಾರಿಗೆ ಕ್ರಮ: ಸಚಿವ ಸಂತೋಷ ಲಾಡ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:18 IST
Last Updated 28 ಅಕ್ಟೋಬರ್ 2025, 5:18 IST
   

ಧಾರವಾಡ: ‘ಹಫ್ತಾ ನೀಡುವಂತೆ ಎಳನೀರು ವ್ಯಾಪಾರಿಗಳಿಗೆ ಧಮ್ಕಿ ಹಾಕಿದ್ದರೆ, ಆ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮ ಜರುಗಿಸುತ್ತಾರೆ’ ಎಂದು ಸಚಿವ ಸಂತೋಷ ಲಾಡ್‌ ತಿಳಿಸಿದರು.

ಈಚೆಗೆ ಬಿಡುಗಡೆಯಾದ ರೌಡಿ ಶೀಟರ್‌ವೊಬ್ಬ ‘ಹಫ್ತಾ’ ನೀಡುವಂತೆ ಎಳನೀರು ವ್ಯಾಪಾರಿಗಳಿಗೆ ಪೀಡಿಸುತ್ತಿದ್ದಾನೆಂದು ಮಾಧಮ್ಯದವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ. ಧಮ್ಕಿ ಹಾಕಿದವರ ವಿರುದ್ಧ ‘ಕೊಕಾ’ (ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಜಾರಿ ಮಾಡುತ್ತಾರೆ’ ಎಂದರು.

‘ಅರಣ್ಯ ಇಲಾಖೆ ಜಾಗದಲ್ಲಿ ಇಸ್ಪಿಟ್ ಆಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ನೌಕರರು ಇದ್ದರೆ ಪ್ರಕರಣದಲ್ಲಿ ಅವರ ಹೆಸರುಗಳನ್ನು ದಾಖಲಿಸುವಂತೆ ಪೊಲೀಸರಿಗೆ ತಿಳಿಸುತ್ತೇನೆ’ ಎಂದು ಉತ್ತರಿಸಿದರು.

ADVERTISEMENT

‘ಎಂಎಸ್‌ಪಿ ನೋಂದಣಿ ಕೇಂದ್ರದಲ್ಲಿ ಹೆಸರು ಕಾಳು ಗುಣಮಟ್ಟ ಇಲ್ಲ ಎಂದು ಉಪ್ಪಿನಬೆಟಗೇರಿ ಮತ್ತು ಧಾರವಾಡದಲ್ಲಿ ನೋಂದಣಿ ಮಾಡುತ್ತಿಲ್ಲ ಎಂಬ ಕುರಿತು ವಿಚಾರಣೆ ಮಾಡುತ್ತೇನೆ’ ಎಂದರು.

‘ಹೈಕಮಾಂಡ್‌ ಸೂಚನೆ ನೀಡಿದರೆ ಸಂಪುಟ ಪು‌ನರ್‌ರಚನೆ ಮಾಡುತ್ತಾರೆ. ಕೋನರೆಡ್ಡಿ ಮಾತ್ರವಲ್ಲ ಎಲ್ಲರೂ ಆಕಾಂಕ್ಷಿಗಳು ಇದ್ದಾರೆ. ಈ ಬಗ್ಗೆ ಏನೂ ಬಹಿರಂಗವಾಗಿ ಮಾತನಾಡಬಾರದು ಎಂದು ಪಕ್ಷ ಸೂಚನೆ ನೀಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.