ಹುಬ್ಬಳ್ಳಿ: ಹಳೇಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಅಹಿತರ ಘಟನೆಯು ಪೂರ್ವ ನಿಯೋಜಿತವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಮಹಮ್ಮದ್‌ಯುಸುಫ್ ಸವಣೂರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಹಾಗೂ ಮುಸ್ಲಿಂ ಮುಖಂಡರ ಮೇಲೆಯೂ ಕಲ್ಲು ಹೊಡೆಯಲಾಗಿದೆ. ಕಲ್ಲು ಎಸೆತದ ವೇಳೆ ಇಂಡಿ ಪಂಪ್ ವೃತ್ತದಲ್ಲಿನ ಹೈಮಾಸ್ಟ್ ದೀಪ ಬಂದ್ ಮಾಡಲಾಗಿತ್ತು. ಆನಂತರ ಯಾರು ಅದನ್ನು ಚಾಲು ಮಾಡಿದರು.
ಅದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆಯೂ ತನಿಖೆ ಆಗಬೇಕು. ರಂಜಾನ್ ಸೂಕ್ಷ್ಮ ತಿಂಗಳಾಗಿದ್ದು, ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ಕಾಪಾಡಬೇಕು. ಎಲ್ಲ ಜಾತಿ ಧರ್ಮಗಳು ಒಂದೇ. ನಮಗೆ ಈಗ ಬೇಕಾಗಿರುವುದು. ಅನ್ನ, ನೀರು, ಅಭಿವೃದ್ಧಿ. ಮೊದಲೇ ನಾವು ಕೊರೊನಾದಿಂದ ಬಸವಳಿದಿದ್ದೇವೆ. ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಎಲ್ಲ ಧರ್ಮ ಗುರುಗಳಲ್ಲಿ ಕೇಳಿಕೊಳ್ಳುತ್ತೇವೆ.
ಗಲಭೆಯಲ್ಲಿ 20-25 ವರ್ಷದ ಯುವಕರೇ ಪಾಲ್ಗೊಂಡಿದ್ದಾರೆ. ಅಷ್ಟೊಂದು ಪ್ರಮಾಣದ ಕಲ್ಲುಗಳನ್ನು ಎಲ್ಲಿಂದ ತಂದರು. ಇದರ ಹಿಂದೆ ಯಾರಿದ್ದಾರೆ. ಬೇರೆ ಕಡೆಯಿಂದ ಬಂದು ಗಲಾಟೆ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು. ಗಲಾಟೆ ವೇಳೆ ಕೈಯಲ್ಲಿ ನಡೆದ ಬೆಳವಣಿಗೆ ಸರಿಯಲ್ಲ.ಕೋವೀಡ್ ನಂತರ ಇಂತಹ ಬೆಳವಣಿಗೆ ಆತಂಕಾರಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.