ADVERTISEMENT

ನವಲಗುಂದ | ‘ಸ್ಪರ್ಧಾತ್ಮಕ ಪರೀಕ್ಷೆಗೆ ಪತ್ರಿಕೆಯನ್ನೂ ಓದಿ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:51 IST
Last Updated 19 ನವೆಂಬರ್ 2025, 2:51 IST
ನವಲಗುಂದ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವನಿಧಿ ಯೋಜನೆ ಅರಿವು ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಂ.ಬಿ. ಬಾಗಡಿ ಮಾತನಾಡಿದರು
ನವಲಗುಂದ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವನಿಧಿ ಯೋಜನೆ ಅರಿವು ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಂ.ಬಿ. ಬಾಗಡಿ ಮಾತನಾಡಿದರು   

ನವಲಗುಂದ: ‘ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಪುಸ್ತಕಗಳ ಜೊತೆಗೆ ಪತ್ರಿಕೆಗಳನ್ನು ಓದಬೇಕು’ ಎಂದು ತಾಲ್ಲೂಕಿನ ಚಿಲಕವಾಡ ಪಿಯು ಕಾಲೇಜು ಪ್ರಾಂಶುಪಾಲ ಮಂಜುಳಾ ಕಲ್ಯಾಣಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮಂಗಳವಾರ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಜಿಲ್ಲಾ ಉದ್ಯೋಗ ಮಾಹಿತಿ ಕೇಂದ್ರ ಹುಬ್ಬಳ್ಳಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಯುವನಿಧಿ ಯೋಜನೆಯ ಅರಿವು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ಉದ್ಯೋಗ ಮಾಹಿತಿ ಕೇಂದ್ರದ ಸಹಾಯಕ ನೇಮಕಾತಿ ಅಧಿಕಾರಿ ಎಂ.ಎಂ. ಕುದುರೆಗೊಂಡ ಹಾಗೂ ತರಬೇತಿದಾರರಾದ ನಾಗರಾಜ್ ಬಡಿಗೇರ ಮಾತನಾಡಿ, ‘ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಕೂಡ ಒಂದು. ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆ ತರಲಾಗಿದ್ದು ತಾಲ್ಲೂಕಿನಲ್ಲಿನರುವ ನಿರುದ್ಯೋಗಿ ಯುವಜನರು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ.ಬಿ. ಬಾಗಡಿ ಮಾತನಾಡಿ ‘ಯುವನಿಧಿ ಯೋಜನೆಯು ಯುವ ಸಮೂಹಕ್ಕೆ ದಾರಿದೀಪವಾಗಿದ್ದು, ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದರು.

ಪ್ಲೇಸ್ಮೆಂಟ್ ಅಧಿಕಾರಿ ಗಂಗಾಧರ ಗೌಡರ ಪ್ರಸ್ತಾವಕವಾಗಿ ಮಾತನಾಡಿದರು, ಐ.ಕ್ಯೂ.ಎ.ಸಿ ಸಂಚಾಲಕರಾದ ಸಂತೋಷ ಹುಬ್ಬಳ್ಳಿ, ಸಹ ಸಂಚಾಲಕರಾದ ಪ್ರಸನ್ನ ಪಂಡರಿ ಉಪಸ್ಥಿತರಿದ್ದರು. ರವಿ ಬ್ಯಾಹಟ್ಟಿ ನಿರೂಪಣೆ ಗ್ರಂಥಪಾಲಕರಾದ ಶ್ರೀಧರ ಲೋಣಕರ ವಂದಿಸಿದರು.

ನಂತರ ಸ್ಥಳದಲ್ಲಿಯೇ ಇದ್ದ ಅಭ್ಯರ್ಥಿಗಳ ಯುವನಿಧಿ ಯೋಜನೆಗೆ ನೋಂದಣಿ ಕಾರ್ಯ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.