ADVERTISEMENT

ಹೊಸಪೇಟೆ | ಬಾಕಿ ಸಂಬಳ ಪಾವತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:27 IST
Last Updated 8 ಫೆಬ್ರುವರಿ 2026, 4:27 IST
ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕನ್ನಡ ವಿಶ್ವವಿದ್ಯಾಲಯ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು 
ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕನ್ನಡ ವಿಶ್ವವಿದ್ಯಾಲಯ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು    

ಹೊಸಪೇಟೆ (ವಿಜಯನಗರ) : ಕನ್ನಡ ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ನೌಕರರಿಗೆ 11 ತಿಂಗಳ ಸಂಬಳ ಪಾವತಿಸಬೇಕು, ಸಂಪನ್ಮೂಲ ಏಜೆನ್ಸಿ ಸರ್ಕಾರಕ್ಕೆ ಮಾಡಿರುವ ವಂಚನೆ ತನಿಖೆ ಮಾಡಬೇಕು ಎಂದು ಆಗ್ರಹಿಸಿ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.

ನಗರದ‌ಲ್ಲಿ ದಲಿತ ಹಕ್ಕುಗಳ ಸಮಿತಿ , ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು‌.

ಕನ್ನಡ ವಿಶ್ವವಿದ್ಯಾಲಯದ 48 ಹೊರಗುತ್ತಿಗೆ ನೌಕರರ 11 ತಿಂಗಳ ವೇತನ ಪಾವತಿಸಿಲ್ಲ. ಸರ್ಕಾರ ಸಮರ್ಪಕ ಅನುದಾನ ಕೊಡದ‌ ಪರಿಣಾಮ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಆರ್ಥಿಕ, ಶೈಕ್ಷಣಿಕ, ಮತ್ತು ಮಾನವ ಸಂಪನ್ಮೂಲ ಪೂರೈಸದ ಇರುವುದರಿಂದ ವಿಶ್ವವಿದ್ಯಾಲಯ ಮುಚ್ಚುವ ಭೀತಿಯಲ್ಲಿದೆ.
ಹೊರಗುತ್ತಿಗೆ ಸಿಬ್ಬಂದಿ ಪಡೆದಿರುವ ಏಜೆನ್ಸಿಗಳಿಂದಲೂ ನೌಕರರಿಗೆ ಮತ್ತು ಸರ್ಕಾರಕ್ಕೆ‌‌ವಂಚನೆಯಾಗಿದೆ. ಇದರ ಬಗ್ಗೆ ಸಮಗ್ರ‌ ತನಿಖೆ‌ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹೊರಗುತ್ತಿಗೆ ನೌಕರರ ಸಂಘದ ಅಧ್ಯಜ್ಷ ಮರಡಿ ಜಂಬಯ್ಯ, ಕಾರ್ಯದರ್ಶಿ ರಮೇಶ ಕುಮಾರ, ತಾಯಪ್ಪ ನಾಯಕ, ಈರಣ್ಣ, ಕರಿಯಪ್ಪ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.