ADVERTISEMENT

‘ಧೈರ್ಯದಿಂದ ಪರೀಕ್ಷೆ ಎದುರಿಸಿ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 2:35 IST
Last Updated 19 ಮಾರ್ಚ್ 2022, 2:35 IST
ಅಣ್ಣಿಗೇರಿಯಲ್ಲಿ ನಡೆದ ಲ್ಯಾಪ್‌ಟಾಪ್ ವಿತರಣೆ ಹಾಗೂ ಹಿಂದಿ ವಿಷಯದ ಕಾರ್ಯಾಗಾರ ಕಾರ್ಯಕ್ರಮವನ್ನು ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಉದ್ಘಾಟಿಸಿದರು
ಅಣ್ಣಿಗೇರಿಯಲ್ಲಿ ನಡೆದ ಲ್ಯಾಪ್‌ಟಾಪ್ ವಿತರಣೆ ಹಾಗೂ ಹಿಂದಿ ವಿಷಯದ ಕಾರ್ಯಾಗಾರ ಕಾರ್ಯಕ್ರಮವನ್ನು ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಉದ್ಘಾಟಿಸಿದರು   

ಅಣ್ಣಿಗೇರಿ: ಮಕ್ಕಳು ಪರೀಕ್ಷೆಯನ್ನು ಪ್ರೀತಿ ಹಾಗೂ ಧೈರ್ಯದಿಂದ ಎದುರಿಸಬೇಕು. ಹೆಚ್ಚಿನ ಅಂಕ ಪಡೆದು ಸಂಸ್ಥೆಗೆ ಮತ್ತು ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು ಎಂದು ಗದದ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ಅವರು ಸ್ಥಳೀಯ ಬಾಪೂಜಿ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಲ್ಯಾಪ್‌ಟಾಪ್ ವಿತರಣೆ ಹಾಗೂ ಹಿಂದಿ ವಿಷಯದ ಕಾರ್ಯಾಗಾರ ಉದ್ಘಾಟಿಸಿದ ಅವರು ‘ಪಾಲಕರು ಮತ್ತು ಶಿಕ್ಷಕರು ಮಕ್ಕಳನ್ನು ಎಂದಿಗೂ ನೀ ದಡ್ಡ ಅಂತ ಕರೆಯಬಾರದು. ಹೀಗೆ ಹೇಳಿದರೆ ಮಕ್ಕಳನ್ನು ನಾವೇ ಹಾಳು ಮಾಡಿದಂತಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು’ ಎಂದರು.

2019-20ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಸಂಸ್ಥೆಯ ಹುಸೇನಸಾಬ ಹುಡೇದ ಹಾಗೂ 2020-21ನೇ ಸಾಲಿನಲ್ಲಿ ಇದೇ ಸಾಧನೆ ಮಾಡಿದ ವರ್ಷಾ ದೊಡ್ಡಗೌಡರ ಅವರಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ADVERTISEMENT

ಸಂಸ್ಥೆಯ ಪ್ರಾಚಾರ್ಯ ಎನ್.ಡಿ.ಧಾರವಾಡ, ರೈತ ವಿಜ್ಞಾನಿ ಅಬ್ದುಲ್‌ ಖಾದರ್‌ ನಡಕಟ್ಟಿನ ಮತ್ತು ಸಾಹಿತಿ ಚಂದ್ರಶೇಖರ ಹೊಸಮನಿ ಅವರಿಗೆ ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಹಿಂದಿ ವಿಷಯದ ಕುರಿತು ಕೆ.ಐ.ಕೊಂಗಿ ಮಾರ್ಗದರ್ಶನ ಮಾಡಿದರು.

ಡಾ.ಎ.ಡಿ.ಧಾರವಾಡ, ಷಣ್ಮುಖ ಗುರಿಕಾರ, ಅರ್ಜುನ ಕಲಾಲ, ಐ.ಜಿ.ಸಮುದ್ರಿ, ಹಸನಸಾಬ ಘೂಡುನಾಯ್ಕರ, ಬಿ.ಜಿ.ಪಾಟೀಲ, ಸೈಯದ್‌ ಅಲಿ, ಮಕಾನದಾರ, ವಿ.ಎಂ. ಎಂ.ಹಿರೇಮಠ, ಎ.ಎಂ.ದೊಡ್ಡಮನಿ, ಎ.ಆರ್.ಅಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.