ADVERTISEMENT

ಕ್ರಿಕೆಟ್‌: ಮುರ್ಡೇಶ್ವರ ಕ್ರಿಕೆಟ್‌ ಅಕಾಡೆಮಿ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 16:09 IST
Last Updated 28 ಸೆಪ್ಟೆಂಬರ್ 2021, 16:09 IST
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿಯ ಕಾರ್ಯದರ್ಶಿ ಇಮ್ರಾನ್‌ ಖಾನ್‌ (ಬಲಬದಿ) ಎಸ್‌ಡಿಎಂ ತಂಡದ ಶೈಬಾಜ್‌ಗೆ ಪಂದ್ಯ ಶ್ರೇಷ್ಠ ಟ್ರೋಫಿ ನೀಡಿದರು. ಆರ್‌ಐಎಸ್‌ ಟೂರ್ನಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಪಾಟೀಲ ಇದ್ದಾರೆ
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿಯ ಕಾರ್ಯದರ್ಶಿ ಇಮ್ರಾನ್‌ ಖಾನ್‌ (ಬಲಬದಿ) ಎಸ್‌ಡಿಎಂ ತಂಡದ ಶೈಬಾಜ್‌ಗೆ ಪಂದ್ಯ ಶ್ರೇಷ್ಠ ಟ್ರೋಫಿ ನೀಡಿದರು. ಆರ್‌ಐಎಸ್‌ ಟೂರ್ನಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಪಾಟೀಲ ಇದ್ದಾರೆ   

ಹುಬ್ಬಳ್ಳಿ: ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್‌ ಅಕಾಡೆಮಿ (ವಿಎಂಸಿಎ) ತಂಡ, ಆರ್‌ಐಎಸ್‌ ಟ್ರೋಫಿ 14 ವರ್ಷದ ಒಳಗಿನವರ ಅಂತರ ಕ್ಯಾಂಪ್‌ ಕ್ರಿಕೆಟ್‌ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ 101 ರನ್‌ಗಳ ಗೆಲುವು ಸಾಧಿಸಿತು.

ರೈಲ್ವೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ವಿಎಂಸಿಎ ಎಂಟು ವಿಕೆಟ್‌ ಕಳೆದುಕೊಂಡು 170 ರನ್‌ ಕಲೆಹಾಕಿತು. ಎದುರಾಳಿ ರೈಲ್ವೆ ಇನ್‌ಸ್ಟಿಟ್ಯೂಟ್‌ ಆಫ್‌ ಸೌತ್‌ ತಂಡ 69 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು. 11 ರನ್‌ ಗಳಿಸಿ ಮೂರು ವಿಕೆಟ್‌ಗಳನ್ನು ಕಬಳಿಸಿದ ಲಕ್ಷ್ಮಿ ನಾರಾಯಣ ಭಟ್ ಪಂದ್ಯಶ್ರೇಷ್ಠ ಗೌರವ ಪಡೆದರು.

ದಿನದ ಇನ್ನೊಂದು ಪಂದ್ಯದಲ್ಲಿ ಧಾರವಾಡದ ಎಸ್‌ಡಿಎಂ ತಂಡ 50 ರನ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಎಸ್‌ಡಿಎಂನ ಶೈಬಾಜ್‌ ಜೆ. (71) ಉತ್ತಮ ಬ್ಯಾಟಿಂಗ್‌ ಬಲದಿಂದ ತಂಡ ಒಟ್ಟು 171 ರನ್‌ ಗಳಿಸಿತು. ಎದುರಾಳಿ ಹುಬ್ಬಳ್ಳಿಯ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ ಎಂಟು ವಿಕೆಟ್‌ ನಷ್ಟಕ್ಕೆ 121 ರನ್‌ ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ಬುಧವಾರ ನಡೆಯುವ ಪಂದ್ಯಗಳಲ್ಲಿ ಶ್ರೀ ದುರ್ಗಾ ಹುಬ್ಬಳ್ಳಿ–ಚಾಂಪಿಯನ್ಸ್‌ ನೆಟ್‌ ಹಾಗೂ ಫಸ್ಟ್‌ ಕ್ರಿಕೆಟ್‌ ಅಕಾಡೆಮಿ–ಎಚ್‌ಸಿಎ ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.