ADVERTISEMENT

ಹುಬ್ಬಳ್ಳಿ: ಜೂಜಾಡುತ್ತಿದ್ದ 320 ಮಂದಿ ಬಂಧನ, ₹6.89 ಲಕ್ಷ ನಗದು ವಶ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 14:21 IST
Last Updated 15 ನವೆಂಬರ್ 2023, 14:21 IST
   

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದ ವಿವಿಧೆಡೆ ಮಂಗಳವಾರ ಜೂಜಾಡುತ್ತಿದ್ದ 320 ಮಂದಿಯನ್ನು ಬಂಧಿಸಿರುವ ಪೊಲೀಸರು, ಒಟ್ಟು 47 ಪ್ರಕರಣಗಳನ್ನು ದಾಖಲಿಸಿಕೊಂಡು ₹6.49 ಲಕ್ಷ ನಗದು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಘಟಕದಿಂದ ಧಾರವಾಡ ಶಹರ, ಧಾರವಾಡ ಉಪನಗರ, ವಿದ್ಯಾನಗರ ಹಾಗೂ ಕೇಶ್ವಾಪುರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿದೆ. 53 ಮಂದಿಯನ್ನು ಬಂಧಿಸಿ, ₹2.28 ಲಕ್ಷ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತರ ಉಪವಿಭಾಗದ ಅಶೋಕನಗರ, ಗೋಕುಲ್ ರೋಡ್, ವಿದ್ಯಾನಗರ, ಎಪಿಎಂಸಿ –ನವನಗರ, ಕೇಶ್ವಾಪುರ, ಹುಬ್ಬಳ್ಳಿ ಉಪನಗರ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿದ್ದು, 142 ಮಂದಿಯನ್ನು ಬಂಧಿಸಿ, ₹1.48 ಲಕ್ಷ ನಗದು ಜಪ್ತಿ ಮಾಡಲಾಗಿದೆ.

ADVERTISEMENT

ದಕ್ಷಿಣ ಉಪವಿಭಾಗದ ಬೆಂಡಿಗೇರಿ, ಹಳೇಹುಬ್ಬಳ್ಳಿ, ಕಸಬಾಪೇಟೆ, ಘಂಟಿಕೇರಿ, ಹುಬ್ಬಳ್ಳಿ ಶಹರ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿದ್ದು, 60 ಜನ ಆರೋಪಿಗಳನ್ನು ಬಂಧಿಲಾಗಿದೆ.

ಧಾರವಾಡ ಉಪವಿಭಾಗದ ಉಪನಗರ, ಶಹರ ಮತ್ತು ವಿದ್ಯಾಗಿರಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ‌. 60 ಮಂದಿಯನ್ನು ಬಂಧಿಸಿ, ₹1.69 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.