ADVERTISEMENT

ಉಪ್ಪಿನಬೆಟಗೇರಿ | ಬೆಳೆ ಹಾನಿ; ಸರ್ಕಾರಕ್ಕೆ ವರದಿ ಶೀಘ್ರ: ವಿ.ಭಾಗ್ಯಾ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 4:09 IST
Last Updated 2 ಸೆಪ್ಟೆಂಬರ್ 2025, 4:09 IST
ಧಾರವಾಡ ತಾಲ್ಲೂಕಿನ ಶಿವಳ್ಳಿ ಹಾಗೂ ಹೆಬ್ಬಳ್ಳಿ ಗ್ರಾಮಗಳ ಜಮೀನುಗಳಿಗೆ ಬೇಟಿ ನೀಡಿದ ಅಧಿಕಾರಿಗಳು, ರಾಶಿ ಮಾಡಲಾದ ಹೆಸರು ಕಾಳು ಪರಿಶೀಲನೆ ಮಾಡಿದರು
ಧಾರವಾಡ ತಾಲ್ಲೂಕಿನ ಶಿವಳ್ಳಿ ಹಾಗೂ ಹೆಬ್ಬಳ್ಳಿ ಗ್ರಾಮಗಳ ಜಮೀನುಗಳಿಗೆ ಬೇಟಿ ನೀಡಿದ ಅಧಿಕಾರಿಗಳು, ರಾಶಿ ಮಾಡಲಾದ ಹೆಸರು ಕಾಳು ಪರಿಶೀಲನೆ ಮಾಡಿದರು   

ಉಪ್ಪಿನಬೆಟಗೇರಿ: ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿ.ಭಾಗ್ಯಾ ನೇತೃತ್ವದ ಅಧಿಕಾರಿಗಳ ತಂಡ ಧಾರವಾಡ ತಾಲ್ಲೂಕಿನ ಶಿವಳ್ಳಿ ಹಾಗೂ ಹೆಬ್ಬಳ್ಳಿ ಗ್ರಾಮಗಳ ಜಮೀನುಗಳಿಗೆ ಸೋಮವಾರ ಬೇಟಿ ನೀಡಿ, ಬೆಳೆ ಹಾನಿ ಹಾಗೂ ರಾಶಿ ಮಾಡಲಾದ ಕಾಳು ಪರಿಶೀಲನೆ ಮಾಡಿತು.

ವಿ.ಭಾಗ್ಯಾ ಮಾತನಾಡಿ, ನಿರಂತರ ಮಳೆಗೆ ಹೆಸರುಕಾಯಿ ಗಿಡದಲ್ಲಿ ಮೊಳಕೆಯೊಡೆದಿದೆ. ಸದ್ಯ ಹೆಸರು, ಉದ್ದು ಕಟಾವು ಮಾಡಲಾಗಿದ್ದು, ರಾಶಿ ಮಾಡಲಾದ ಕಾಳು ಬೂದಿ ಬಣ್ಣದಿಂದ ಕೂಡಿದೆ. ಹಾನಿಯಾದ ಬಗ್ಗೆ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ತಹಶೀಲ್ಧಾರ್‌ ಡಿ.ಎಚ್.ಹೂಗಾರ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ, ತೋಟಗಾರಿಕೆ ಇಲಾಖೆಯ ಇಮ್ತಿಯಾಜ ಚಿಂಗಾಪೂರಿ, ರೇಖಾ ಬೆಳ್ಳಟ್ಟಿ, ಮೋಹನ ಲಕ್ಕಮ್ಮನವರ, ಎಚ್.ಎಂ.ಬಾದಾಮಿ, ಸಿ.ಬಿ.ಮಟ್ಟಿ, ಗಿರಿಮಲ್ಲಯ್ಯ ಉಮಚಿ, ವಿಠ್ಠಲ ಭೋವಿ, ಅಶೋಕ ಸೂರ್ಯವಂಶಿ, ಬಸವರಾಜ ಸೂರ್ಯವಂಶಿ ಶಿವಾನಂದ ಲಂಬಿ, ಶಿವಾನಂದ ಮುದ್ದಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.