
ಧಾರವಾಡ: ಜಿಲ್ಲೆಯ 6 ತಾಲ್ಲೂಕುಗಳ 65,217 ರೈತರಿಗೆ (72,909.36 ಹೆಕ್ಟೇರ್ ಬೆಳೆ ಹಾನಿ) ₹ 63.16 ಕೋಟಿ ಪರಿಹಾರ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.
ಭೂಮಿ ಪರಿಹಾರ ತಂತ್ರಾಂಶದ ಮೂಲಕ ಪರಿಹಾರ ಪಾವತಿಸಲಾಗಿದೆ. ತಾಲ್ಲೂಕುವಾರು ಧಾರವಾಡ 11,981 ರೈತರಿಗೆ (12,462.49 ಹೆಕ್ಟೇರ್ ಬೆಳೆ ಹಾನಿ) ₹10.59 ಕೋಟಿ, ನವಲಗುಂದ 18,433 ರೈತರಿಗೆ (20,685.16 ಹೆಕ್ಟೇರ್ ಬೆಳೆ ಹಾನಿ) 18.74ಕೋಟಿ, ಹುಬ್ಬಳ್ಳಿ 11,058 ರೈತರಿಗೆ (13,856.43 ಹೆಕ್ಟೇರ್ ಬೆಳೆ ಹಾನಿ) ₹ 11.78ಕೋಟಿ, ಕುಂದಗೋಳ10,912 ರೈತರಿಗೆ (11,261.02 ಹೆಕ್ಟೇರ್ ಬೆಳೆ ಹಾನಿ) ₹ 9.58 ಕೋಟಿ, ಹುಬ್ಬಳ್ಳಿ ನಗರ 839 ರೈತರಿಗೆ (769.12ಹೆಕ್ಟೇರ್ ಬೆಳೆ ಹಾನಿ) ₹ 65.51 ಲಕ್ಷ, ಅಣ್ಣಿಗೇರಿ 11,994 ರೈತರಿಗೆ (13,875.13 ಹೆಕ್ಟೇರ್ ಬೆಳೆ ಹಾನಿ) ₹11.79 ಕೋಟಿ ಪಾವತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.