ಹುಬ್ಬಳ್ಳಿ: ಫ್ರಾನ್ಸ್‌ನಲ್ಲಿ ಆ.20ರಿಂದ ಆ.24ರವರೆಗೆ ನಡೆಯಲಿರುವ 1,200ಕಿ.ಮೀ. ಸೈಕ್ಲಿಂಗ್ ಇವೆಂಟ್‌ನಲ್ಲಿ ಹುಬ್ಬಳ್ಳಿ ಬೈಸಿಕಲ್ ಕ್ಲಬ್‌ನ ಸದಸ್ಯರಾದ ಗುಲ್ಜಾರ್ ಅಹ್ಮದ್ ಹಾಗೂ ಶೆಟ್ಟಪ್ಪ ಪಿರಂಗಿ ಭಾಗವಹಿಸಲಿದ್ದಾರೆ.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಬೈಸಿಕಲ್ ರ‍್ಯಾಲಿ ಅತ್ಯಂತ ಪ್ರತಿಷ್ಠಿತವಾಗಿದೆ. ಇದರಲ್ಲಿ ಪಾಲ್ಗೊಳ್ಳುವ ಮೂಲಕ ಇವರಿಬ್ಬರೂ ಹುಬ್ಬಳ್ಳಿಗೆ ಹಿರಿಮೆ ತಂದುಕೊಟ್ಟಿದ್ದಾರೆ. ಇತ್ತೀಚೆಗೆ ಇವರಿಬ್ಬರನ್ನೂ ಫಾನ್ಸ್‌ಗೆ ಬೀಳ್ಕೊಡಲಾಯಿತು ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.