ಧಾರವಾಡ: ಕ್ರೈಸ್ತ ಸಂಸ್ಥೆಗಳು ಸುಮಾರು ನಾಲ್ಕು ದಶಕಗಳಿಂದ ದಸರಾ ರಜೆಯನ್ನು ಕ್ರಿಸ್‌ಮಸ್ ರಜೆಗಾಗಿ ಹೊಂದಾಣಿಕೆ ಮಾಡುತ್ತಾ ಬಂದಿವೆ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಬಾಸೆಲ್ ಮಿಶನ್, ಪ್ರೆಸೆಂಟೆಶನ್, ಸಂತ ಜೋಸೆಫ್ ಶಾಲೆಯವರು ಜಿಲ್ಲಾಧಿಕಾರಿಗೆ ತಿಳಿಸಿದ್ಧಾರೆ.
ಕ್ರೈಸ್ತ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳು ದಸರಾ ರಜೆಯಲ್ಲಿ ಶಾಲೆಯನ್ನು ನಡೆಸುತ್ತಿವೆ ಮತ್ತು ರಜೆ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕೆಲವು ಸಂಘಟನೆಗಳು ಆಕ್ಷೇಪಣೆ ಎತ್ತಿವೆ. ಕ್ರೈಸ್ತ ಸಂಸ್ಥೆಗಳು ನಿಯಮಗಳನ್ನು ಉಲ್ಲಂಘಿಸಿಲ್ಲ. ದಸರಾ ರಜೆಯ ಅವಧಿಯಲ್ಲಿ ರಜೆಯನ್ನು ಹೊಂದಾಣಿಕೆ ಮಾಡಿಕೊಂಡು ಕ್ರಿಸ್‌ಮಸ್‌ಗೆ ರಜೆ ನೀಡಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಅನುಮತಿ ನೀಡಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ಧಾರೆ.
ಮೇಲಧಿಕಾರಿಗಳು ಅನುಮತಿ ನೀಡಿದ್ದರೂ, ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರೈಸ್ತ ಸಮುದಾಯದ ಶಾಲೆಗಳು ಕ್ರಿಸಮಸ್ ರಜೆಗಾಗಿ ಪ್ರಸ್ತಾವನೆಯನ್ನು ಕಚೇರಿಗೆ ಸಲ್ಲಿಸಿಲ್ಲ. ಕೂಡಲೇ ಶಾಲೆಗಳಲ್ಲಿ ನಡೆಯುತ್ತಿರುವ ತರಗತಿ ಹಾಗೂ ಪರೀಕ್ಷೆ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ ಎಂದು ತಿಳಿಸಿದ್ಧಾರೆ.
ಶಾಲೆ ನಡೆಸಲು ಸಮಸ್ಯೆ ಮಾಡಿದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.