ಹುಬ್ಬಳ್ಳಿ: ‘ದಶಲಕ್ಷಣ ಪರ್ವವು ವ್ಯಕ್ತಿ ಪ್ರಧಾನವಾಗಿರದೆ, ಗುಣಪ್ರಧಾನ ಪರ್ವವಾಗಿದೆ. ಆತ್ಮನ ಸಹಜ ಗುಣಗಳಾದ ಕ್ಷಮೆ, ಮೃದುತ್ವ, ಸರಳತನ, ಶುಚಿತ್ವ, ಸತ್ಯ, ಸಂಯಮ ಮುಂತಾದವುಗಳ ಮನನ, ಆರಾಧನೆ ಹಾಗೂ ಜೀವನದಲ್ಲಿ ಅಳವಡಿಸಿಕೊಂಡು ದೈವತ್ವದತ್ತ ಹೆಜ್ಜೆ ಹಾಕುವುದೇ ಆಗಿದೆ’ ಎಂದು ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿಮಠದ ಲಕ್ಷೀಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.
ಇಲ್ಲಿನ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ದಿಗಂಬರ ಜೈನ ಸಮಾಜವು ಆಯೋಜಿಸಿರುವ 10 ದಿನಗಳ ಪೂಜೆ ಹಾಗೂ ಪ್ರವಚನ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಬೆಳಿಗ್ಗೆ ವಿವಿಧ ಮಂಗಲ ದ್ರವ್ಯಗಳಿಂದ ಜಿನಾಭಿಷೇಕ, ಸಂಗೀತಮಯ ಪೂಜೆ ನಡೆಯಿತು.
ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ಸುಹಾಸ್ ಜವಳಿ, ಶ್ರೇಣಿಕರಾಜ ರಾಜಮಾನೆ, ಶಾಂತಿನಾಥ ಹೋತಪೇಟಿ, ವಿನೋದಕುಮಾರ ಗೋಟಡಿಕೆ, ಬ್ರಹ್ಮಕುಮಾರ ಬೀಳಗಿ, ಶಶಿಧರ ಬಳಗೇರ, ಅಜಯ ಬೀಳಗಿ, ದೇಶಭೂಷಣ ಜಗಶೆಟ್ಟಿ ಮಹಾವೀರ ದಿನಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.