
ಉಪ್ಪಿನಬೆಟಗೇರಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಆಡಳಿತದ ಅವಧಿಯಲ್ಲಿ ದೇಶದ ರಕ್ಷಣೆ ಹಾಗೂ ಭದ್ರತಾ ವ್ಯವಸ್ಥೆ ಸುಧಾರಿಸಿದೆ’ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಹೇಳಿದರು.
ಧಾರವಾಡ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ತಡಕೋಡ– ಖಾನಾಪುರ ವೀರ ಮಾಜಿ ಸೈನಿಕರ ಸಂಘ ಭಾನುವಾರ ಏರ್ಪಡಿಸಿದ್ದ ‘ಎರಡನೇ ವಾರ್ಷಿಕೋತ್ಸವ’ದಲ್ಲಿ ಅವರು ಮಾತನಾಡಿದರು.
‘ಯುಪಿಎ ಆಡಳಿತದ ಅವಧಿಯಲ್ಲಿ ಭಾರತದ ಮೇಲೆ ನೆರೆಯ ದೇಶಗಳು ದಾಳಿ ಮಾಡುತ್ತಿದ್ದವು, ಯೋಧರು ಪ್ರತ್ಯುತ್ತರ ನೀಡಲು ಅಂದಿನ ಸರ್ಕಾರದ ಆದೇಶಕ್ಕಾಗಿ ಕಾಯಬೇಕಾದ ಸ್ಥಿತಿ ಇತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಶತ್ರು ದೇಶದ ಏಟಿಗೆ ಕೂಡಲೇ ಎದಿರೇಟು ನೀಡುವ ಸ್ವಾತಂತ್ರ‍್ಯವನ್ನು ಸೈನ್ಯಕ್ಕೆ ಪ್ರಧಾನಿ ನೀಡಿದ್ದಾರೆ’ ಎಂದು ಹೇಳಿದರು.
ಭಾರತ ಮಾತೆಯ ರಕ್ಷಣೆಗಾಗಿ ಕಾರ್ಯ ನಿರ್ವಹಿಸುವ ಸೈನಿಕರನ್ನು ಸದಾ ನೆನೆಯಬೇಕು ಎಂದರು.
ಸೈನಿಕರನ್ನು ಸನ್ಮಾನಿಸಲಾಯಿತು. ಮುಖಂಡರಾದ ಈರಣ್ಣ ಕರಲಿಂಗನವರ, ವಿಠ್ಠಲ ಪೂಜಾರ, ಮಹೇಶ ಯಲಿಗಾರ, ಮಹದೇವ ದಂಡಿನ, ತಡಕೋಡ ಹಾಗೂ ಖಾನಾಪುರ ಗ್ರಾಮದ ನಿವೃತ್ತ ಸೈನಿಕರು, ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.