ಧಾರವಾಡ: ಗುತ್ತಿಗೆದಾರ ಸಂಬಳ ಸರಿಯಾಗಿ ಪಾವತಿಸುತ್ತಿಲ್ಲ ಮತ್ತು ಕಡಿಮೆ ಸಂಬಳ ನೀಡುತ್ತಾರೆ
ಎಂದು ಆರೋಪಿಸಿ ಮಹಾನಗರ ಪಾಲಿಕೆ ಗುತ್ತಿಗೆ ಪೌರಕಾರ್ಮಿಕ ಕೃಷ್ಣ ವಜ್ಜನ್ನವರ (35) ಅವರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಟೋಲ್‌ನಾಕಾ ಸಮೀಪದಲ್ಲಿ ಅವರು ಆತ್ಮಹತ್ನೆಗೆ ಯತ್ನಿಸಿದ್ಧಾರೆ. ಇತರ ಪೌರ ಕಾರ್ಮಿಕರು ಕೃಷ್ಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ಧಾರೆ.
ಗುತ್ತಿಗೆದಾರ ಕೃಷ್ಣ ಅರವೀಡು ಅವರು ಸಂಬಳ ಸರಿಯಾಗಿ ನೀಡುತ್ತಿಲ್ಲ ಎಂದು ಕೃಷ್ಣ ವಜ್ಜನ್ನವರ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ಧಾರೆ. ವಿದ್ಯಾರಿಗೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.