ADVERTISEMENT

ಮೊಹರಂ ಆಚರಣೆ: ಅಗ್ನಿಕುಂಡದ ಮೇಲೆ ಕೂತು ಭಕ್ತಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 6:05 IST
Last Updated 30 ಜುಲೈ 2023, 6:05 IST
ಮೊಹರಂ ಪ್ರಯುಕ್ತ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ಅಗ್ನಿ ಕುಂಡದ ಮೇಲೆ ಕಂಬಳಿ ಹಾಸಿ, ಸಲೀಮ್ ಶಿರಸಗಿ ನಮಾಜ ಮಾಡಿದರು
ಮೊಹರಂ ಪ್ರಯುಕ್ತ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ಅಗ್ನಿ ಕುಂಡದ ಮೇಲೆ ಕಂಬಳಿ ಹಾಸಿ, ಸಲೀಮ್ ಶಿರಸಗಿ ನಮಾಜ ಮಾಡಿದರು   

ಸಿಂದಗಿ/ಮುದ್ದೇಬಿಹಾಳ: ಮೊಹರಂ ಪ್ರಯುಕ್ತ ಶನಿವಾರ ಜಿಲ್ಲೆಯ ಸಿಂದಗಿ ಮತ್ತು ಮುದ್ದೇಬಿಹಾಳದಲ್ಲಿ ಭಕ್ತರು ಅಗ್ನಿಕುಂಡದ ಮೇಲೆ ಕಂಬಳಿ ಹಾಸಿ, ಅದರ ಮೇಲೆ ಕೂತು ಭಕ್ತಿ ಸಮರ್ಪಿಸಿದರು.

ಸಿಂದಗಿ ತಾಲ್ಲೂಕಿನ ಮೋರಟಗಿಯಲ್ಲಿ ಅಗ್ನಿ ಕುಂಡದ ಕೆಂಡದ ಮೇಲೆ ಕಂಬಳಿ ಹಾಸಿ ಮಂದೇವಾಲ ಗ್ರಾಮದ ಸಲೀಮ್ ಶಿರಸಗಿ ಅವರು ಎರಡು ಬಾರಿ ನಮಾಜ್ ಮಾಡಿದರು.

ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳ ಗ್ರಾಮದಲ್ಲಿ ಅಗ್ನಿಕುಂಡದ ಮೇಲೆ ಕಂಬಳಿ ಹಾಸಿ ಯಲ್ಲಾಲಿಂಗ ಹಿರೇಹಾಳ ಅವರು ಅಲಾಯ್ ದೇವರಿಗೆ ಭಕ್ತಿ ಸಮರ್ಪಿಸಿದರು.

ADVERTISEMENT

ಅಗ್ನಿ ಕುಂಡದಲ್ಲಿ ದೇವರ ಡೋಲಿ, ಪಂಜಾಗಳನ್ನು ಹೊತ್ತು ಹೋಗುವುದು, ನಡೆಯುವುದು ಸಾಮಾನ್ಯ, ಆದರೆ ನಮಾಜ್‌ ಮಾಡಿದ್ದು ಮತ್ತು ಹರಕೆ ತೀರಿಸಿದ್ದು ವಿಶೇಷ.

ಮೊಹರಂ ಪ್ರಯುಕ್ತ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ಅಗ್ನಿ ಕುಂಡದ ಮೇಲೆ ಕಂಬಳಿ ಹಾಸಿ ಸಲೀಮ್ ಶಿರಸಗಿ ನಮಾಜ ಮಾಡಿದರು
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದಲ್ಲಿ ಯಲ್ಲಾಲಿಂಗ ಹಿರೇಹಾಳ ಅವರು ಅಗ್ನಿಕುಂಡದಲ್ಲಿ ಕಂಬಳಿ ಹಾಸಿ ಅದರ ಮೇಲೆ ಕೂತು ಭಕ್ತಿ ಸಮರ್ಪಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.