
ಪ್ರಜಾವಾಣಿ ವಾರ್ತೆ
ಧಾರವಾಡ: ನವಲೂರು ಛಾವಣಿಯ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಎಐಡಿಎಸ್‌ಒ ಜಿಲ್ಲಾ ಘಟಕದವರು ಶಾಲೆಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಎಐಡಿಎಸ್‍ಒ ಜಿಲ್ಲಾಧ್ಯಕ್ಷೆ ಸಿಂಧು ಕೌದಿ ಮಾತನಾಡಿ, ನವಲೂರು ಶಾಲೆಯಲ್ಲಿ 71 ಮಕ್ಕಳು ಇದ್ದಾರೆ. ಶಾಲೆ ಮುಚ್ಚಿದರೆ ಬಡ ಕೂಲಿ-ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಜಿಲ್ಲಾ ಅಧ್ಯಕ್ಷೆ ಸಿಂಧು ಕೌದಿ, ಶಾಂತೇಶ್ ನಂದಿಕೋಲಮಠ, ಪುಂಡಲೀಕ ತಳವಾರ, ನಿಂಗಪ್ಪ ಲೋಕುರ, ಫಕೀರಪ್ಪ ಕಾಡಪ್ನವರ, ಆನಂದ್ ಕಾಂಬಳೆ, ಆತ್ಮಾನಂದ ತಳವಾರ, ಪುಂಡಲಿಕ ಲೋಕೂರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.