ADVERTISEMENT

ಹೋರಾಟಕ್ಕೆ ನ್ಯಾಯ ಸಿಗುವವರೆಗೆ ಮಾಲಾರ್ಪಣೆ ಮಾಡಿಸಿಕೊಳ್ಳಲ್ಲ: ದಿಂಗಾಲೇಶ್ವರ ಶ್ರೀ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 8:21 IST
Last Updated 2 ಏಪ್ರಿಲ್ 2024, 8:21 IST
   

ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಂಬಿಸಿ ಮೋಸ ಮಾಡುತ್ತಾರೆ. ಅವರ ನಡೆವಳಿಕೆ ವಿರೋಧಿಸಿ ಹೋರಾಟಕ್ಕೆ ಇಳಿದಿದ್ದೇನೆ ಎಂದು ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದ ಸಾಧನಕೇರಿಯ ಸೇವಾಲಯದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು. ಹೋರಾಟಕ್ಕೆ ನ್ಯಾಯ ಸಿಗುವವರೆಗೆ ವೇದಿಕೆಯಲ್ಲಿ ಮಾಲಾರ್ಪಣೆ ಮಾಡಿಸಿಕೊಳ್ಳದಿರಲು ಸಂಕಲ್ಪ ಮಾಡಿದ್ದೇನೆ ಎಂದರು.

ಪ್ರಲ್ಹಾದ ಜೋಶಿ ಅವರು ಪಾಪ ಕಾರ್ಯ ಮಾಡಿ ಅದನ್ನು ಬೇರೆಯವರ ತಲೆಗೆ ಕಟ್ಟುವ ಕೆಲಸ ಮಾಡುತ್ತಾರೆ. ಈ ಭಾಗದ ಲಿಂಗಾಯತ ನಾಯಕರು ನಾಶವಾಗಿದ್ದಾರೆ. ಅವರ ಹೊಡೆತಕ್ಕೆ ಬಹುಸಂಖ್ಯಾತರು ನುಚ್ಚುನೂರಾಗಿದ್ದಾರೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.