
ಬೆಳಗಾವಿ: ‘ರಾಜ್ಯದಲ್ಲಿ ಹಿಂದೆ ದೈವಗಣ ಅಧಿಕಾರದಲ್ಲಿತ್ತು. ಈಗ ರಾಕ್ಷಸಗಣ ಇದೆ. ಈ ರಾಕ್ಷಸಗಣದ ನಾಯಕ ಡಿ.ಕೆ.ಶಿವಕುಮಾರ್, ಎರಡನೇಯದ್ದು ರಾಷ್ಟ್ರದ್ರೋಹಿ ಜಮೀರ್ ಅಹಮದ್, ಮೂರನೇಯದ್ದು ಡಾ.ಜಿ.ಪರಮೇಶ್ವರ, ನಾಲ್ಕನೇಯದ್ದು ಪ್ರಿಯಾಂಕ್ ಖರ್ಗೆ, ಐದನೇಯದ್ದು ಸುಳ್ಳಿನ ಸರದಾರ ಸಿದ್ದರಾಮಯ್ಯ. ಈ ಐದೂ ಗಣಗಳು ರಾಜ್ಯದ ಜನರಿಗೆ ಸಂಕಷ್ಟ ಕೊಡುತ್ತಿವೆ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದರು.
‘ಅಪ್ಪ– ಮಗ ವರ್ಗಾವಣೆಯಲ್ಲಿ ಅಪಾರ ಹಣ ತಿಂದರು. ಇಡೀ ರಾಜ್ಯದಲ್ಲಿ ದೊಡ್ಡ ಭ್ರಷ್ಟ ಈ ಸಿದ್ದರಾಮಯ್ಯ. ಜಾತಿಗಣತಿ ಶೀಘ್ರ ಜಾರಿ ತರುತ್ತೇನೆ ಎಂದು ಹೇಳುತ್ತಲೇ ಜಾತಿ– ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದರು. ಇಷ್ಟು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ಕರ್ನಾಟಕದಲ್ಲಿ ನಾನು ಕಂಡಿರಲಿಲ್ಲ’ ಎಂದು ಅವರು ಹರಿಹಾಯ್ದರು.
‘ಜಮೀರ್ ಅಹಮದ್ ಹಿಂದೂಸ್ತಾನದಲ್ಲಿ ಹುಟ್ಟಿದ್ದಾರೋ? ಪಾಕಿಸ್ತಾನದಲ್ಲಿ ಹುಟ್ಟಿದ್ದಾರೋ ಗೊತ್ತಿಲ್ಲ. ನಾವು ಸ್ಪೀಕರ್ ಸ್ಥಾನದಲ್ಲಿ ಮುಸ್ಲಿಮನನ್ನು ಕೂರಿಸಿದ್ದೇವೆ. ಎಲ್ಲ ಶಾಸಕರೂ ಮುಸ್ಲಿಮನಿಗೆ ಬಗ್ಗಿ ನಮಸ್ಕರಿಸುವಂತೆ ಮಾಡಿದ್ದೇವೆ ಎಂದು ಜಮೀರ್ ಹೇಳಿಕೊಂಡಿದ್ದಾರೆ. ಇಂಥವರು ಹಿಂದೂಸ್ತಾನದಲ್ಲಿರಬೇಕೆ? ಪಾಕಿಸ್ತಾನದಲ್ಲಿರಬೇಕೆ ಎಂದು ಪ್ರಶ್ನಿಸಿದರು.
‘ಸುವರ್ಣ ವಿಧಾನಸೌಧದಲ್ಲಿನ ವೀರ ಸಾವರ್ಕರ್ ಅವರ ಭಾವಚಿತ್ರ ತೆಗೆಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರ ಅಪ್ಪನಿಗೂ ಇದು ಸಾಧ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.