ADVERTISEMENT

ಕುಂದಗೋಳ: 42 ದೇಸಿ ಗೋಧಿ ತಳಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 15:45 IST
Last Updated 10 ಮಾರ್ಚ್ 2025, 15:45 IST
ಕುಂದಗೋಳ ತಾಲ್ಲೂಕಿನ‌ ಮಳಲಿ ಗ್ರಾಮದಲ್ಲಿ ದೇಸಿ ಗೋಧಿ ತಳಿ ಕ್ಷೇತ್ರೋತ್ಸವ ಜರುಗಿತು
ಕುಂದಗೋಳ ತಾಲ್ಲೂಕಿನ‌ ಮಳಲಿ ಗ್ರಾಮದಲ್ಲಿ ದೇಸಿ ಗೋಧಿ ತಳಿ ಕ್ಷೇತ್ರೋತ್ಸವ ಜರುಗಿತು   

ಕುಂದಗೋಳ: ದೇಸಿ ತಳಿಗಳ ಮಹತ್ವವನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಅವುಗಳ ಬಳಕೆಯನ್ನು ಹೆಚ್ಚಿಸಬೇಕು, ಜವಾರಿ ತಳಿಗಳನ್ನು ಕೃಷಿ ವೈವಿಧ್ಯದ ಸಂಪತ್ತು ಎಂದು ಪರಿಗಣಿಸಿ, ಮುಂದಿನ ಪೀಳಿಗೆಗೂ ಪರಿಚಯಿಸಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಆರ್. ಹಂಚಿನಾಳ ಹೇಳಿದರು.

ಅವರು ತಾಲ್ಲೂಕಿನ ಮಳಲಿ ಗ್ರಾಮದ ಕೃಷಿಕ ಚಂದ್ರಪ್ಪ ಹಾದಿಮನಿ ಅವರ ಹೊಲದಲ್ಲಿ ಬೆಳೆದಿರುವ 42 ದೇಸಿ ಗೋಧಿ ತಳಿಗಳ ಕ್ಷೇತ್ರೋತ್ಸವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಗೋಧಿಯು ಮೂಲತಃ ಯೂಫ್ರಟಿಸ್ ನದಿ ತೀರದ ಖಂಡಗಳಿಂದ ಎಲ್ಲೆಡೆ ವ್ಯಾಪಿಸಿದೆ. ಈ ಧಾನ್ಯದ ಮೌಲ್ಯವರ್ಧನೆಗೆ ಗಮನ ನೀಡಬೇಕಾಗಿದ್ದು, ಭೂಮಿಗೆ ವಿಷ ಉಣಿಸಿ, ಆಹಾರ ಉತ್ಪಾದನೆ ಮಾಡುವುದು ಅಪಾಯಕಾರಿಯಾಗಿದೆ ಎಂದರು.

ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಮಾತನಾಡಿ, ಈಗಿನ ರೋಗ ಪೀಡಿತ ಇಷ್ಟಪಡುವ ತಿನಿಸುಗಳನ್ನು ಗೋಧಿಯಿಂದ ಮಾಡಬಹುದು. ಆದರೆ ಅದಕ್ಕೆ ಬಳಸುವ ಗೋಧಿಯು ರಸ ವಿಷಗಳಿಂದ ಕಾಯಿಲೆಗೆ ಕಾರಣವಾಗುತ್ತಿದೆ ಈ ಹಿನ್ನೆಲೆಯಲ್ಲಿ ದೇಸಿ ಗೋಧಿ ಉಳಿಸಿ, ಬೆಳೆಸುವ ಅಗತ್ಯವಿದೆ ಎಂದರು.

ADVERTISEMENT

ಸಾವಯವ ಕೃಷಿಕ ಆನಂದತೀರ್ಥ ಪ್ಯಾಟಿ, ಬೀಜ ಸಂರಕ್ಷಕ ಶಂಕರ ಲಂಗಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೈತ ಮೂಕಪ್ಪ ಪೂಜಾರ್, ಯಶಸ್ವಿನಿ ಮಹಿಳಾ ಸಂಘದ ಅಧ್ಯಕ್ಷೆ ಕಮಲಮ್ಮ, ಸಿರಿಧಾನ್ಯ ಕೃಷಿಕ ಪ್ರವೀಣ ಹೆಬ್ಬಳ್ಳಿ, ಮಳಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ಧಲಿಂಗೇಶ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು.

ಮಂಜು ಸವದತ್ತಿ ಸ್ವಾಗತಿಸಿದರು. ಶಾಂತಕುಮಾರ್ ನಿರೂಪಿಸಿದರು. ಸೃಷ್ಟಿ ವಂದಿಸಿದರು. ವಿವಿಧ ಭಾಗಗಳಿಂದ ದೇಸಿ ತಳಿ ಸಂರಕ್ಷಕರು, ಸಾವಯವ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.