ಧಾರವಾಡ: ಜಿಲ್ಲಾ ಭವನದ ಆವರಣದಲ್ಲಿ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳು ಪ್ರಾಚೀನ ಕಾಲದ ನಾಣ್ಯಗಳು, ನೋಟುಗಳನ್ನು ವೀಕ್ಷಿಸಿದರು. ಅವು ಬಳಕೆಯಲ್ಲಿದ್ದ ಕಾಲಘಟ್ಟ, ಮೌಲ್ಯ ಇತ್ಯಾದಿ ಕುರಿತು ಸಂಗ್ರಹಕಾರನಿಂದ ಮಾಹಿತಿ ಪಡೆದರು.
ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ಆಯೋಜಿಸಿರುವ ಶಿಬಿರದಲ್ಲಿ ಕಲಘಟಗಿಯ ಸುನಿಲ್ ಕಮ್ಮಾರ ಅವರು ಪ್ರಾಚೀನ ನಾಣ್ಯ, ನೋಟುಗಳನ್ನು ಪ್ರದರ್ಶಿಸಿದ್ದಾರೆ.
ವಿಜಯನಗರ ಮತ್ತು ಮೈಸೂರು ರಾಜರು, ಟಿಪ್ಪು ಸುಲ್ತಾನ್, ನಿಜಾಮರು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆ ಕಾಲಘಟ್ಟದ ನಾಣ್ಯ, ನೋಟುಗಳು ಇವೆ.ವಿವಿಧ ದೇಶಗಳ ಕರೆನ್ಸಿ ಪ್ರದರ್ಶಿಸಲಾಗಿದೆ.
‘ಪ್ರಾಚೀನ ಕಾಲದಲ್ಲಿ ಬಂಗಾರ, ಬೆಳ್ಳಿ, ತಾಮ್ರ, ಹಿತ್ತಾಳೆ ಮುಂತಾದ ಲೋಹದ ನಾಣ್ಯಗಳು ಬಳಕೆಯಲ್ಲಿದ್ದವು. ವಸ್ತು ವಿನಿಮಯಕ್ಕಾಗಿ ಬಳಕೆಗೆ ಬಂದವು. ಅವು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಮಕ್ಕಳಿಗೆ ನಾಣ್ಯಗಳ ಇತಿಹಾಸ ಪರಿಚಯಿಸಬೇಕು. ಅವುಗಳ ಅಧ್ಯಯನದ ಮಹತ್ವ ತಿಳಿಸಬೇಕು’ ಎಂದು ಸುನಿಲ್ ಕಮ್ಮಾರ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಎಚ್.ಎಚ್.ಕುಕನೂರ, ಕಮಲ ಬೈಲೂರು, ಕಾಂಚನ ಅಮಟೆ, ಸುಭಾಷ್ ಚಂದ್ರಗಿರಿ, ಉಮಾದೇವಿ ಹೂಗಾರ, ಜಯಶ್ರೀ ಮಣ್ಣಿಕೇರಿ, ಶಶಿಧರ್ ಮುಂದಿನಮನಿ, ಸುನಿತಾ ನಾಡಿಗೇರ, ಕಮಲಾ ಮಸಣ್ಣಿ, ಅಶೋಕ್ ಬೆಳ್ಳಿಗಟ್ಟಿ, ಮಂಜುನಾಥ್ ಬದ್ನಿಗಟ್ಟಿ, ಮಂಜುಳಾ ಬೆನಕನಹಳ್ಳಿ, ಯಶೋಧ ತಾಯಿ ಭಜಂತ್ರಿ, ರವಿ ಹಿರೇಮಠ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.