ADVERTISEMENT

ಸವಾಲುಗಳನ್ನು ಧೈರ್ಯವಾಗಿ ಎದುರಿಸಿ

ಉಪ ಮೇಯರ್‌ ಉಮಾ ಮುಕುಂದ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 15:40 IST
Last Updated 10 ಆಗಸ್ಟ್ 2022, 15:40 IST
ಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಬಿಬಿಎ ಮಹಿಳಾ ಮಹಾವಿದ್ಯಾಲಯ ಮತ್ತು ಮ್ಯಾಟ್ಸ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ‘ಬಿಜ್‌ ಫೆಮಿನಾ–2022’ ಉತ್ಸವ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರು, ಗಣ್ಯರು ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಬಿಬಿಎ ಮಹಿಳಾ ಮಹಾವಿದ್ಯಾಲಯ ಮತ್ತು ಮ್ಯಾಟ್ಸ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ‘ಬಿಜ್‌ ಫೆಮಿನಾ–2022’ ಉತ್ಸವ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರು, ಗಣ್ಯರು ಉದ್ಘಾಟಿಸಿದರು   

ಹುಬ್ಬಳ್ಳಿ: ‘ಮಹಿಳೆಯರು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು’ ಎಂದು ಉಪ ಮೇಯರ್‌ ಉಮಾ ಮುಕುಂದ ಹೇಳಿದರು.

ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಬಿಬಿಎ ಮಹಿಳಾ ಮಹಾವಿದ್ಯಾಲಯ ಮತ್ತು ಮ್ಯಾಟ್ಸ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ‘ಬಿಜ್‌ ಫೆಮಿನಾ–2022’ ಉತ್ಸವ ಹಾಗೂ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವ ಅವಕಾಶವನ್ನೂ ಚಿಕ್ಕದೆಂದು ಭಾವಿಸಬಾರದು. ನಾನು ಕೆಲವೇ ಮಕ್ಕಳಿಂದ ಮನೆ ಪಾಠ ಆರಂಭಿಸಿದೆ. ಪ್ರಸ್ತುತ 200 ಮಕ್ಕಳಿಗೆ ವಿದ್ಯಾದಾನ ಮಾಡಲಾಗುತ್ತಿದೆ. ಮಹಿಳೆಯರು ಉದ್ಯಮಗಳಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು’ ಎಂದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ಅರವಿಂದ ಕುಬಸದ ಮಾತನಾಡಿ, ‘ವ್ಯಕ್ತಿತ್ವ ನಿರ್ಮಾಣ,ಉದ್ಯಮಶೀಲತೆ ತರಬೇತಿ ಕುಟುಂಬದಿಂದಲೇ ಆರಂಭವಾಗುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ಉದ್ಯಮ ಸ್ಥಾಪನೆಗೆ ಮುಂದೆ ಬಂದರೆ ಅವರಿಗೆ ನೈತಿಕ ಮತ್ತು ಆರ್ಥಿಕ ಬೆಂಬಲ ನೀಡಲಾಗುವುದು’ ಎಂದು ಹೇಳಿದರು.

ಬಿಲ್ವಾ ಎಂಟರ್‌ಪ್ರೈಸಸ್‌ ಅಪರ್ಣಾ ಪೂಜಾರಿ, ನುಸ್ತೆ ಟೇಕ್‌ಅವೇ ಉದ್ಯಮದ ಸಂಸ್ಥಾಪಕ ಮುಖ್ಯಸ್ಥೆ ಪ್ರಾಪ್ತಿ ಶಾನಭಾಗ್‌, ಡೇಲಿ ಬ್ರೆಡ್‌ ಉದ್ಯಮದ ಸಂಸ್ಥಾಪಕಿ ಸ್ಮಿತಾ ಪಾಟೀಲ ಮಾತನಾಡಿದರು.

ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಲಿಂಗರಾಜ ಅಂಗಡಿ, ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಅನುರಾಧಾ ಹೊಸಕೋಟೆ, ಬಿಬಿಎ ಕಾಲೇಜಿನ ಪ್ರಾಚಾರ್ಯ ವಿಕಾಸ ರಬಕವಿಮಠ ಅವರು ಇದ್ದರು.

ಕಾರ್ಯಕ್ರಮದ ಸಂಚಾಲಕಿ ಕ್ರಿಸ್ಟಿನಾ ರೆಬೆಲ್ಲೊ ಸ್ವಾಗತಿಸಿದರು. ಮಮತಾ ಅಣ್ಣಿಗೇರಿ ವಂದಿಸಿದರು. ಪ್ರೊ.ಸ್ಮಿತಾ ಶೆಟ್ಟರ್ ಹಾಗೂ ಪ್ರೊ.ಶ್ವೇತಾ ಕಾಗೇನವರ ನಿರೂಪಿಸಿದರು. ಪ್ರೊ.ಸುನಿತಾ ಚಿಕ್ಕವೀರಯ್ಯನವರಮಠ, ಪ್ರೊ.ಸವಿತಾ ಅರಳೆಲಮಠ, ಪ್ರೊ.ಸರಿತಾ ಲತಾ, ಹಾಗೂ ಪ್ರೊ.ಜಬೀನ ಇದ್ದರು. ಹೋಟೆಲ್‌ ನಿರ್ವಹಣೆ ಕುರಿತು ವಸ್ತು ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.