ADVERTISEMENT

ವಿದ್ಯಾರ್ಥಿಗಳಿಗೆ ವಸ್ತ್ರವಿನ್ಯಾಸ ಕಾರ್ಯಾಗಾರ

ಫ್ಯಾಷನ್‌ ಡಿಸೈನರ್‌ ಅನೂಜ್ ಶರ್ಮಾ ಅವರಿಂದ ತರಬೇತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 4:16 IST
Last Updated 27 ಜುಲೈ 2022, 4:16 IST
ಹುಬ್ಬಳ್ಳಿಯ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ಸಂಸ್ಥೆಯಲ್ಲಿ ವಸ್ತ್ರ ವಿನ್ಯಾಸ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅನೂಜ್‌ ಶರ್ಮಾ, ಜ್ಯೋತಿ ಬಿದಸಾರಿಯಾ ಇದ್ದಾರೆ
ಹುಬ್ಬಳ್ಳಿಯ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ಸಂಸ್ಥೆಯಲ್ಲಿ ವಸ್ತ್ರ ವಿನ್ಯಾಸ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅನೂಜ್‌ ಶರ್ಮಾ, ಜ್ಯೋತಿ ಬಿದಸಾರಿಯಾ ಇದ್ದಾರೆ   

ಹುಬ್ಬಳ್ಳಿ: ನಗರದ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ಸಂಸ್ಥೆಯಲ್ಲಿ (ಐಎನ್‌ಐಎಫ್‌ಡಿ)ವಿದ್ಯಾರ್ಥಿಗಳಿಗಾಗಿ ವಸ್ತ್ರ ವಿನ್ಯಾಸದ ಹೊಸ ವಿಧಾನ ‘ಬಟನ್ ಮಸಾಲಾ’ಕುರಿತುಎರಡುದಿನಗಳಕಾರ್ಯಾಗಾರಹಮ್ಮಿಕೊಳ್ಳಲಾಗಿತ್ತು.

ಅಹಮದಾಬಾದ್‌ನ ವಸ್ತ್ರ ವಿನ್ಯಾಸಕ ಅನೂಜ್‌ ಶರ್ಮಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಅನೂಜ್ ಶರ್ಮಾ ಮಾತನಾಡಿ, ಇದು ಫ್ಯಾಷನ್‌ ಲೋಕದ ಹೊಸ ವಿಧಾನವಾಗಿದೆ. ಬಟ್ಟೆಯನ್ನು ಕತ್ತರಿಸದೆ, ಮಷಿನ್‌ ಬಳಸದೆ ಕೇವಲ ಬಟನ್‌ಗಳು ಮತ್ತು ರಬ್ಬರ್‌ಬ್ಯಾಂಡ್ ಬಳಸಿ ವಸ್ತ್ರ ವಿನ್ಯಾಸ ಮಾಡಲಾಗುತ್ತದೆ ಎಂದರು.

ಐಎನ್‌ಐಎಫ್‌ಡಿ ನಿರ್ದೇಶಕಿ ಜ್ಯೋತಿ ಬಿದಸಾರಿಯಾ ಮಾತನಾಡಿ, ಬಟನ್‌ ಮಸಾಲಾ ವಿಧಾನ ಹುಬ್ಬಳ್ಳಿಗೆ ಹೊಸದು. ಕಾರ್ಯಾಗಾರದಲ್ಲಿ 80 ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದರು.

ADVERTISEMENT

ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಉಡುಪುಗಳನ್ನು ಪ್ರದರ್ಶಿಸಿದರು. ಕೇಂದ್ರದ ಮುಖ್ಯಸ್ಥೆ ಮೇಘಾ ಕಿತ್ತೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.