ADVERTISEMENT

ಹುಬ್ಬಳ್ಳಿ: ರವಾ ಮಿಲ್ ನಲ್ಲಿ ಅಗ್ನಿ ಅವಘಡ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 5:33 IST
Last Updated 8 ಜುಲೈ 2021, 5:33 IST
ವೀರಾಪೂರ ಓಣಿಯಲ್ಲಿರುವ ಟಿ.ಕೆ. ಹಬೀಬ ರವಾ ಮಿಲ್ ಗೆ ಬೆಂಕಿ ತಗುಲಿದ್ದು, ಮೊದಲ ಮಹಡಿಯಲ್ಲಿ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದೆ
ವೀರಾಪೂರ ಓಣಿಯಲ್ಲಿರುವ ಟಿ.ಕೆ. ಹಬೀಬ ರವಾ ಮಿಲ್ ಗೆ ಬೆಂಕಿ ತಗುಲಿದ್ದು, ಮೊದಲ ಮಹಡಿಯಲ್ಲಿ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದೆ   

ಹುಬ್ಬಳ್ಳಿ: ನಗರದ ವೀರಾಪೂರ ಓಣಿಯಲ್ಲಿರುವ ಟಿ.ಕೆ. ಹಬೀಬ ರವಾ ಮಿಲ್ ಗೆ ಬೆಂಕಿ ತಗುಲಿದ್ದು, ಮೊದಲ ಮಹಡಿಯಲ್ಲಿ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದೆ. ಇದು ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ.

ಗುರುವಾರ ಬೆಳಗಿನ ಜಾವ ಘಟನೆ ನಡೆದಿದ್ದು, ರವಾ ಮಿಲ್ ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಆ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದೆ. ಕಟ್ಟಡದ ಮೇಲಿನ ಭಾಗದಲ್ಲಿ ಹೊತ್ತಿರುವ ಬೆಂಕಿ ಎಲ್ಲ ಕಡೆಯೂ ಆವರಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.