ADVERTISEMENT

ಜನರಿಗೆ ತಲುಪಿದ ಗ್ಯಾರಂಟಿ ಯೋಜನೆ: ಸಚಿವ ಸಂತೋಷ್ ಲಾಡ್

₹50 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 7:24 IST
Last Updated 8 ಜನವರಿ 2026, 7:24 IST
ಕಲಘಟಗಿ ತಾಲ್ಲೂಕಿನ ರಾಮನಾಳ ಗ್ರಾಮದಿಂದ ದಾಸ್ತಿಕೊಪ್ಪ ಮಾರ್ಗದ ರಸ್ತೆ ಸುಧಾರಣೆಗೆ ₹50 ಲಕ್ಷ ಅನುದಾನ ವೆಚ್ಚದ ಕಾಮಗಾರಿಗೆ ಸಚಿವ ಸಂತೋಷ್ ಲಾಡ್ ಬುಧವಾರ ಭೂಮಿಪೂಜೆ ನೆರೆವೇರಿಸಿದರು
ಕಲಘಟಗಿ ತಾಲ್ಲೂಕಿನ ರಾಮನಾಳ ಗ್ರಾಮದಿಂದ ದಾಸ್ತಿಕೊಪ್ಪ ಮಾರ್ಗದ ರಸ್ತೆ ಸುಧಾರಣೆಗೆ ₹50 ಲಕ್ಷ ಅನುದಾನ ವೆಚ್ಚದ ಕಾಮಗಾರಿಗೆ ಸಚಿವ ಸಂತೋಷ್ ಲಾಡ್ ಬುಧವಾರ ಭೂಮಿಪೂಜೆ ನೆರೆವೇರಿಸಿದರು   

ಕಲಘಟಗಿ: ಕಳೆದ ಎರಡುವರೇ ವರ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ತಾಲ್ಲೂಕಿನ ರಾಮನಾಳ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯಿಂದ ರಾಮನಾಳ ಗ್ರಾಮದಿಂದ ದಾಸ್ತಿಕೊಪ್ಪ ಮಾರ್ಗದ ರಸ್ತೆ ಸುಧಾರಣೆಗೆ ₹50 ಲಕ್ಷ ಅನುದಾನದ ಕಾಮಗಾರಿಗೆ ಬುಧವಾರ ಭೂಮಿಪೂಜೆ ನರೇವೇರಿಸಿ ಮಾತನಾಡಿದರು.

ಸ್ವ–ಕ್ಷೇತ್ರಕ್ಕೆ ಭೇಟಿ ನೀಡುತ್ತಿಲ್ಲ ಎನ್ನುವ ಆರೋಪದ ಬಗ್ಗೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಜೊತೆಗೆ ಕಾರ್ಮಿಕ ಸಚಿವನಾಗಿದ್ದರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಲಾಖೆ ಕೆಲಸದ ನಿಮಿತ್ಯ ಸಂಚರಿಸಿಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದರು.

ADVERTISEMENT

ಮುಜರಾಯಿ ಇಲಾಖೆಯಿಂದ ಗ್ರಾಮದ ಗ್ರಾಮದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮಂಜೂರಾದ ₹7 ಲಕ್ಷ ಮೊತ್ತದ ಚೆಕ್‌ನ್ನು ಗ್ರಾಮಸ್ಥರಿಗೆ ನೀಡಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಆರ್.ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಗ್ರಾಮ ಪಂಚಾಯಿತಿ ಪಿಡಿಓ ವೆಂಕಪ್ಪ ಹೊತ್ತಿಗೆಗೌಡ್ರ, ಅಧ್ಯಕ್ಷ ಬಸವರಾಜ ಮೆಣಸಿನಕಾಯಿ, ಸದಸ್ಯರಾದ ಪಕೀರಪ್ಪ ಗೌಳಿ, ದೇವರಾಜ ತಳವಾರ ಹಾಗೂ ಮುಖಂಡರಾದ ನರೇಶ ಮಲೆನಾಡು, ಸೋಮಶೇಖರ ಬೆನ್ನೂರ,ಶಂಕರ ದಾಸನಕೊಪ್ಪ, ಸಿದ್ದು ತಲಬಾಗಿಲು, ಗುರು ಕಂಪ್ಲಿ,ಪ್ರಭು ರಾಮನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.