ADVERTISEMENT

ಹೂವಿನಲ್ಲಿ ಕಂಗೊಳಿಸಿದ ಧಾರವಾಡದ ಕೃಷಿ ವಿಶ್ವವಿದ್ಯಾಲಯ

ಗೌರಮ್ಮ ಕಟ್ಟಿಮನಿ
Published 10 ಸೆಪ್ಟೆಂಬರ್ 2023, 2:55 IST
Last Updated 10 ಸೆಪ್ಟೆಂಬರ್ 2023, 2:55 IST
<div class="paragraphs"><p>ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಆಯೋಜಿಸಿದ ಫಲಪುಷ್ಪ ಪ್ರದರ್ಶನದಲ್ಲಿ ಹೂಗಳಿಂದ ನಿರ್ಮಿಸಲಾದ ಕೃಷಿ ವಿವಿ ಮಾದರಿ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ</p></div>

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಆಯೋಜಿಸಿದ ಫಲಪುಷ್ಪ ಪ್ರದರ್ಶನದಲ್ಲಿ ಹೂಗಳಿಂದ ನಿರ್ಮಿಸಲಾದ ಕೃಷಿ ವಿವಿ ಮಾದರಿ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

   

ಹುಬ್ಬಳ್ಳಿ: ಹೂವು ಚೆಲುವೆಲ್ಲಾ ತಂದೆಂದಿತು...ಎನ್ನುವಂತೆ ಎಲ್ಲೆಲ್ಲೂ ಹೂವುಗಳೇ.  ಸುತ್ತ ಕಣ್ಣಾಡಿಸಿದರೆ ತರಹೇವಾರಿ, ಆಕರ್ಷಕ ಬಣ್ಣದ ಹೂಗಳು, ಹೆಜ್ಜೆ ಇಡುತ್ತಿದ್ದಂತೆ ಸ್ವಾಗತಿಸುವ ವಿವಿಧ ಹೂಗಳ ಪಕಳೆಗಳಿಂದ ಅಲಂಕರಿಸಿದ ಬೃಹತ್‌ ರಂಗೋಲಿ ಹಾಗೂ ಅದರ ಮಧ್ಯೆ ಸಿರಿಧಾನ್ಯಗಳ ಅಲಂಕಾರ, ಹೂಗಳಿಂದಲೇ ಸಿಂಗಾರಗೊಂಡ ಗೊಂಬೆಗಳು ಎಲ್ಲವೂ ಎಲ್ಲರನ್ನೂ ಆಕರ್ಷಿಸುತ್ತವೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಈ ಸೊಬಗನ್ನು ಕಾಣಬಹುದು.

ADVERTISEMENT

‘ಕೃಷಿ ವಿಶ್ವವಿದ್ಯಾಲಯ ಅಮೃತ ಮಹೋತ್ಸವದ ಸಂಭ್ರಮಾಚರಣೆಯಲ್ಲಿದ್ದು ಫಲಪುಷ್ಪ ಪ್ರದರ್ಶನಲ್ಲಿ ಮೊದಲ ಬಾರಿಗೆ ಕೃಷಿ ವಿವಿ ಮಾದರಿ ತಯಾರಿಸಲಾಗಿದೆ.  ಬಿ.ಎಸ್ಸಿ ಕೃಷಿ ಪದವಿ ಅಂತಿಮ ವರ್ಷದ 10 ವಿದ್ಯಾರ್ಥಿಗಳು ಸತತ 12 ಗಂಟೆಗೂ ಹೆಚ್ಚು ಹೊತ್ತು ಶ್ರಮಿಸಿದ್ದಾರೆ. ಸೇವಂತಿಗೆ, ಚೆಂಡು ಹೂ, ಬಟನ್‌ ಗುಲಾಬಿ, ಸೂರ್ಯಕಾಂತಿ, ಜರ್ಬರಾ ಸೇರಿ 35 ಕೆಜಿ ಹೂಗಳನ್ನು ಬಳಸಲಾಗಿದೆ’ ಎಂದು ಕೃಷಿ ಮಹಾವಿದ್ಯಾಲಯದ ತೋಟಗಾರಿಕೆ ವಿಭಾಗದ ಮುಖ್ಯಸ್ಥ ಪ್ರೊ.ಎಸ್‌.ಜಿ.ಅಂಗಡಿ ‘ಪ್ರಜಾವಾಣಿ‘ಗೆ ತಿಳಿಸಿದರು.

ಫಲಪುಷ್ಪ ಪ್ರದರ್ಶನದಲ್ಲಿ ಹೂ ಹಣ್ಣು ತರಕಾರಿ ಹಾಗೂ ಔಷಧೀಯ ಗುಣವಿರುವ ಸಸಿಗಳು ಸೇರಿದಂತೆ 500ಕ್ಕೂ ಹೆಚ್ಚು ವೈವಿಧ್ಯತೆಗಳನ್ನು ಕಾಣಬಹುದು. ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು 5 ಕ್ವಿಂಟಲ್‌ ಹೂಗಳನ್ನು ಬಳಸಲಾಗಿದೆ.
ಪ್ರೊ.ಎಸ್‌.ಜಿ.ಅಂಗಡಿ, ತೋಟಗಾರಿಕೆ ವಿಭಾಗದ ಮುಖ್ಯಸ್ಥ, ಕೃಷಿ ಮಹಾವಿದ್ಯಾಲಯ

ಚಂದ್ರಯಾನ –3 ಯಶಸ್ವಿಯಾದ ವಿವಿಧ ಹಂತಗಳ ಚಿತ್ರಗಳನ್ನು ಥರ್ಮಕೋಲ್‌ನಲ್ಲಿ ಬಿಡಿಸಿ, ಅದನ್ನು ಹೂಗಳಿಂದ ಹಾಗೂ ವಿಕ್ರಮ್‌ ಲ್ಯಾಂಡರ್‌ ಚಿತ್ರವನ್ನು ಸಿರಿಧಾನ್ಯಗಳಿಂದ ಅಲಂಕರಿಸಲಾಗಿದೆ’ ಎಂದರು.

ಜಿಪ್ಸೊಫಿಲಾ, ಅಲಂಕಾರಿಕ ಸೂರ್ಯಕಾಂತಿ, ಹೆಲಿಕೊನಿಯಾ, ಗುಲಾಬಿ, ಆರ್ಕಿಡ್‌, ಜರ್ಬರಾ, ಸೇವಂತಿಗೆ, ಆಲಸ್ಟ್ರೊಮೆರಿಯಾ, , ಗ್ಲಾಡಿಯೋಲಸ್‌,  ಟುಲಿಪ್‌, ಡಚ್‌ ತಳಿಗಳು  ಸೇರಿದಂತೆ ನೂರಾರು ಬಗೆಯ ಹೂಗಳು ನೋಡುಗರ ಮನಸೂರೆಗೊಂಡವು.  

ಗಮನಸೆಳೆದ ಫ್ರೂಟ್‌ಆರ್ಟ್‌

ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಿದ ಸ್ವಾತಂತ್ರ್ಯ ಹೋರಾಟಗಾರರು, ವಚನಕಾರರು, ಯಕ್ಷಗಾನ, ಮಹಾತ್ಮರು, ಕವಿಗಳು ಹಾಗೂ ಶಿವಲಿಂಗ,  ಹಾಗೂ ರೈತರ ನಿತ್ಯ ಕಾರ್ಯಕದ ಕಲಾಕೃತಿಗಳು ಗಮನ ಸೆಳೆದವು. ಕುಂಬಳಕಾಯಿಯಿಂದ ತಯಾರಿಸಿದ ಮೀನುಗಳು, ಬದನೆಕಾಯಿ, ಕ್ಯಾರೆಟ್‌ನಿಂದ ತಯಾರಿಸಿದ ನವಿಲು, ಬಾತುಕೋಳಿ, ಹೂಕೋಸಿನಿಂದ ತಯಾರಿಸಿದ ಹೂಗಳು, ಹಾಗಲಕಾಯಿಯಿಂದ ತಯಾರಿಸಿದ ಮೊಸಳೆ ಜನರನ್ನು ಆಕರ್ಷಿಸಿದವು.

ಔಷಧ ಮತ್ತು ಸುಗಂಧ ಸಸ್ಯಗಳು:  ಹಿಪ್ಪಲಿ, ಮಧುನಾಶಿನಿ, ನೆಲನೆಲ್ಲಿ, ಇನ್ಸುಲಿನ್‌ ಗಿಡಿ, ನೆಲಬೇವು, ಜಪಾನೀ ಪುದೀನ, ಕಚೂರ, ಬಿಳಿ ಚಿತ್ರಮೂಲ, ಜಲಬ್ರಾಹ್ಮಿ, ಶಂಕಪುಷ್ಟಿ ಸೇರಿದಂತೆ ವಿವಿಧ 80 ಸಸಿಗಳು ಪ್ರದರ್ಶನದಲ್ಲಿದ್ದವು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಆಯೋಜಿಸಿದ ಫಲಪುಷ್ಪ ಪ್ರದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಫ್ರೂಟ್‌ ಆರ್ಟ್‌ ಅನ್ನು ವೀಕ್ಷಿಸಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಆಯೋಜಿಸಿದ ಫಲಪುಷ್ಪ ಪ್ರದರ್ಶನದಲ್ಲಿ ಹೂಗಳಿಂದ ನಿರ್ಮಿಸಿದ ಗೊಂಬೆಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.