ಸಾಂದರ್ಭಿಕ ಚಿತ್ರ
ಕಲಘಟಗಿ: ‘ದೇಶದಲ್ಲಿ ಆಹಾರದ ಗುಣಮಟ್ಟ ಕುಸಿದಿದೆ. ಎಲ್ಲರೂ ನೈಸರ್ಗಿಕ ಕೃಷಿ ಮಾದರಿ ಅನುಸರಿಸಿ ಸ್ಥಳೀಯ ಬೀಜ ಬಳಕೆ, ಅಂತರ ಬೆಳೆ ಪದ್ಧತಿ, ಸಾವಯವ ಗೊಬ್ಬರ ಬಳಕೆ, ಹೈನುಗಾರಿಕೆ ಅಳವಡಿಸಿಕೊಂಡು ಮುಂದಿನ ಜನಾಂಗದ ಆರೋಗ್ಯ ಕಾಪಾಡಬೇಕಿದೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹಿರಿಯ ಬೇಸಾಯ ತಜ್ಞ ಬಸವರಾಜ ಏಣಗಿ ಹೇಳಿದರು.
ತಾಲ್ಲೂಕಿನ ಹುಲ್ಲಂಬಿ ಗ್ರಾಮದಲ್ಲಿ ನೈಸರ್ಗಿಕ ಕೃಷಿ ಅರಿವು ಮತ್ತು ಸೋಯಾ ಅವರೆ ಮೌಲ್ಯ ವರ್ಧನೆ ಕುರಿತು ಕೃಷಿ ಇಲಾಖೆಯಿಂದ ಈಚೆಗೆ ಆಯೋಜಿಸಿದ್ದ ತರಬೇತಿಯಲ್ಲಿ ಅವರು ಮಾತನಾಡಿದರು.
‘ಕಲಬೆರಕೆ ಎಣ್ಣೆ ಬಳಸಿ ಆರೋಗ್ಯ ಹಾಳು ಮಾಡಿಕೊಳ್ಳದೆ ಸೋಯಾ ಅವರೆ ಬೆಳೆದು ಗ್ರಾಮಮಟ್ಟದಲ್ಲಿ ಎಣ್ಣೆ ಗಾಣ ಆರಂಭಿಸಿ ಸ್ಥಳೀಯ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು’ ಎಂದರು.
ಕೃಷಿ ಇಲಾಖೆಯಲ್ಲಿನ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಕೃಷಿ ಉಪ ನಿರ್ದೇಶಕಿ ಜಯಶ್ರೀ ಹಿರೇಮಠ ತಿಳಿಸಿದರು.
ದುಮ್ಮವಾಡ ರೈತ ಸಂಪರ್ಕ ಕೇಂದ್ರ ಅಧಿಕಾರಿ ಯು.ವೈ. ಕಟ್ಟಿ, ಸಿಬ್ಬಂದಿ ಸಚಿನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.