ADVERTISEMENT

884 ಹೊಸ ಬಸ್‌ ಪೂರೈಕೆಗೆ ಕ್ರಮ: ಸಚಿವ ರಾಮಲಿಂಗಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 16:33 IST
Last Updated 8 ಜನವರಿ 2024, 16:33 IST
<div class="paragraphs"><p>ಧಾರವಾಡದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿಗೆ&nbsp; ಭೂಮಿಪೂಜೆ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಎನ್‌ಡಬ್ಲುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್ ಪಾಲ್ಗೊಂಡಿದ್ದರು</p></div>

ಧಾರವಾಡದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿಗೆ  ಭೂಮಿಪೂಜೆ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಎನ್‌ಡಬ್ಲುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್ ಪಾಲ್ಗೊಂಡಿದ್ದರು

   

ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲುಕೆಆರ್‌ಟಿಸಿ) ವ್ಯಾಪ್ತಿಯ ಏಳು ಜಿಲ್ಲೆಗಳಿಗೆ ಹೊಸದಾಗಿ 784 ಬಸ್‌ ಹಾಗೂ ನಗರ ಸಾರಿಗೆಗೆ 100 ಎಲೆಕ್ಟ್ರಿಕ್‌ ಬಸ್‌ ಸೇರಿದಂತೆ ಒಟ್ಟು 884 ಬಸ್‌ಗಳನ್ನು ಈ ಭಾಗಕ್ಕೆ ಒದಗಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಎನ್‌ಡಬ್ಲುಕೆಆರ್‌ಟಿಸಿಗೆ ಮಾರ್ಚ್‌ ಹೊತ್ತಿಗೆ 784 ಬಸ್‌ಗಳನ್ನು ಪೂರೈಸುವಂತೆ ಸೂಚನೆ ನೀಡಿದ್ದೇನೆ. ಈ ಪೈಕಿ 375 ಬಸ್‌ ನೀಡಲು ಆದೇಶ ನೀಡಲಾಗಿದೆ. ಬಾಕಿ ಬಸ್‌ ಪೂರೈಕೆ ನಿಟ್ಟಿನಲ್ಲಿ ಟೆಂಡರ್‌ಗೆ ಅನುಮೋದನೆ ನೀಡಲಾಗಿದೆ. ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಹೊಸ ಬಸ್‌ಗಳು ಬಂದ ನಂತರ ಈ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.

ADVERTISEMENT

ನಗದು ರಹಿತ ಡಿಜಿಟಲ್‌ (ಯುಪಿಐ) ವ್ಯವಸ್ಥೆ ಹಿಂದೆ ಇಲ್ಲಿ ಚಾಲನೆ ನೀಡಲಾಗಿತ್ತು. ಕೆಎಸ್‌ಆರ್‌ಟಿಸಿಯಲ್ಲೂ ಇನ್ನು ಮೂರು ತಿಂಗಳಲ್ಲಿ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಪಘಾತ ಪ್ರಕರಣಗಳಲ್ಲಿ ನೌಕರರು ಸಾವಿಗೀಡಾದರೆ ₹ 50 ಲಕ್ಷ ವಿಮೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಕೆಎಸ್‌ಆರ್‌ಟಿಸಿಯಲ್ಲಿಈ ಪರಿಹಾರ ಧನ ಮೊತ್ತ ₹ 1 ಕೋಟಿ ಇದೆ, ಇಲ್ಲಿಯೂ ಅಷ್ಟನ್ನೇ ನೀಡುವ ಕುರಿತು ಬ್ಯಾಂಕ್‌ನವರೊಂದಿಗೆ ಮಾತನಾಡಲು ಎನ್‌ಡಬ್ಲುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಭರತ್‌ ಅವರಿಗೆ ತಿಳಿಸಿದ್ದೇನೆ. ಕರ್ತವ್ಯದಲ್ಲಿದ್ದಾಗ ನೌಕರ ಮೃತಪಟ್ಟರೆ ಅವರ ಕುಟುಂಬಕ್ಕೆ ₹ 5 ಲಕ್ಷ ನೀಡಲು ಅನುಮತಿ ನೀಡಲಾಗಿದೆ ಎಂದರು.

‘ಈಗ ಹೊಸದಾಗಿ ನಾವು 2 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಒಂದು ಬಸ್‌ ಅನ್ನೂ ಖರೀದಿಸಿರಲಿಲ್ಲ. ನೇಮಕಾತಿಯನ್ನು ಮಾಡಿರಲಿಲ್ಲ’ ಎಂಉ ಉತ್ತರಿಸಿದರು.

ಧಾರವಾಡ ನಗರ ಸಾರಿಗೆ ಬಸ ನಿಲ್ದಾಣವನ್ನು₹ 13.11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಈಗಿರುವ ನಿಲ್ದಾಣ 1974ರಲ್ಲಿ ನಿರ್ಮಾಣವಾದದ್ದು. ಹೊಸ ನಿಲ್ದಾಣ ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಗಿಸಲು ಗುತ್ತಿಗೆದಾರಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು.

ಶಾಸಕ ಎನ್.ಎಚ್.ಕೋನರೆಡ್ಡಿ ಇದ್ದರು.

ಹೊಸ ನಿಲ್ದಾಣದಲ್ಲಿ ಏನೇನು
ನಿರ್ಮಾಣ ಮುಖ್ಯ ಕಟ್ಟಡ ಮಹಿಳೆಯರಿಗೆ ವಿಶ್ರಾಂತಿ ಗೃಹ ಮಹಿಳೆಯರಿಗೆ ಶೌಚಾಲಯ ಬಸ್‍ಗಳ ನಿಲುಗಡೆಗೆ ನಾಲ್ಕು ಅಂಕಣ ಕುಡಿಯುವ ನೀರಿನ ವ್ಯವಸ್ಥೆ ಪ್ರಯಾಣಿಕರಿಗೆ ಆಸನ ಸೌಕರ್ಯ ನೆಲಹಾಸಿಗೆ ಗ್ರಾನೈಟ್ ಅಳವಡಿಕೆ ಉಪಹಾರ ಗೃಹ ವಾಣಿಜ್ಯ ಮಳಿಗೆ ಸಿಬ್ಬಂದಿ ವಿಶ್ರಾಂತಿ ಕೊಠಡಿ ಹಾಗೂ ಸಂಚಾರ ನಿಯಂತ್ರಣಾ ಕೊಠಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.