ಹುಬ್ಬಳ್ಳಿ: ‘ಕ್ಯಾಟರ್‍ಯಾಕ್ಟ್ ಬ್ಲ್ಯೂ ಡೇ ಪ್ರಯುಕ್ತ ನಗರದ ವಾಸನ್ ಕಣ್ಣಿನ ಆಸ್ಪತ್ರೆ ವತಿಯಿಂದ ದೇಶಪಾಂಡೆ ನಗರದ ಕೋರ್ಟ್ ಸರ್ಕಲ್ ಬಳಿಯ ವಾಸನ್ ಕಣ್ಣಿನ ಆಸ್ಪತ್ರೆಯಲ್ಲಿ ಮೇ 13ರಂದು ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಕಣ್ಣಿನ ಉಚಿತ ಸಮಗ್ರ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ’ ಎಂದು ಆಸ್ಪತ್ರೆಯ ವೈದ್ಯ ಡಾ.ಚಂದ್ರಕಾಂತ ಪೂಜಾರ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಣ್ಣಿನ ಆರೋಗ್ಯ ತಪಾಸಣೆಯೊಂದಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ರೆಟೀನಾ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಇಸಿಜಿ., ಬಿ–ಸ್ಕ್ಯಾನ್, ಕಿಡ್ನಿಯ ಕಾರ್ಯದ ಪರೀಕ್ಷೆ ಸೇರಿದಂತೆ ಕಣ್ಣಿನ ಶಸ್ತ್ರಚಿಕಿತ್ಸೆಯ ಪೂರ್ವ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ. ಜೊತೆಗೆ ಔಷಧಿಯನ್ನೂ ಉಚಿತವಾಗಿ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
ಶಿಬಿರದಲ್ಲಿ ಭಾಗವಹಿಸುವ ಪಿಂಚಣಿದಾರರು ಗುರುತಿನ ಚೀಟಿ, ವಿಮಾ ಯೋಜನೆ ಕಾರ್ಡ್, ಆಧಾರ್ ಕಾರ್ಡ್ ಮತ್ತು ಪಿಂಚಣಿ ಪುಸ್ತಕವನ್ನು ಕಡ್ಡಾಯವಾಗಿ ತರಬೇಕು ಎಂದರು. ಮಾಹಿತಿಗೆ ಮೊ: 9900282644, 8660299638 ಸಂಪರ್ಕಿಸಬಹುದು. ಡಾ.ಪಿ.ಎಸ್.ಪ್ರೀತಿ, ಅಶೋಕ ಸಾಂಬ್ರಾಣಿ, ವಿನಾಯ ಎಂ.ಬುಲುಬಲೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.