ADVERTISEMENT

ಉಚಿತ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 4:05 IST
Last Updated 13 ಏಪ್ರಿಲ್ 2022, 4:05 IST
ಅಳ್ನಾವರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಕಾರ್ಮಿಕರ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಿತು
ಅಳ್ನಾವರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಕಾರ್ಮಿಕರ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಿತು   

ಅಳ್ನಾವರ: ಸದಾ ಕಷ್ಟಕರವಾದ ಕೆಲಸದಲ್ಲಿ ತೊಡಗುವ ಕಾರ್ಮಿಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯವಂತರಾಗಿದ್ದರೆ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ಹೇಳಿದರು.

ಕಾರ್ಮಿಕ ಇಲಾಖೆ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ ‘ಹುಬ್ಬಳ್ಳಿಯ ಕೆಎಲ್‌ಇ ಸುಚಿರಾಯು ಆಸ್ಪತ್ರೆಯ ಸಿಬ್ಬಂದಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹುಬ್ಬಳಿಯ ಸುಚಿರಾಯು ಆಸ್ಪತ್ರೆಯ ಸಿಬ್ಬಂದಿ ಗೌಸ ತೋರಗಲ್ ‘ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ 21 ನಮೂನೆಯ ಆರೋಗ್ಯ ತಪಾಸಣೆ ಮಾಡಲಾಗಿದೆ’ ಎಂದರು.

ADVERTISEMENT

ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ನದೀಮ ಕಾಂಟ್ರ್ಯಾಕ್ಟರ್, ಸದಸ್ಯ ತಮೀಮ ತೇರಗಾಂವ, ಜಾವಿದ ತೊಲಗಿ, ಡಾ. ರಿಷಿಕೇಶ, ಎಂ.ಡಿ.ಶೀರಿಲ್, ಲ್ಯಾಬ್‌ ಸಿಬ್ಬಂದಿ ನೇತ್ರಾವತಿ ಭೂಸಣ್ಣವರ, ಸ್ಟೆಫಿ ಭಂಡಾರಿ, ಮುಸ್ತಾನಶೇಖ, ಬಿ.ಜಿ. ಮಂಜುನಾಥ, ಪ್ರವೀಣ ಪವಾರ, ಗುರುರಾಜ ಸಬನೀಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.