ADVERTISEMENT

ಹುಬ್ಬಳ್ಳಿ: ಸೌಹಾರ್ದ ಕ್ರಿಕೆಟ್‌ ಸರಣಿ 26ರಂದು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 4:49 IST
Last Updated 25 ಫೆಬ್ರುವರಿ 2022, 4:49 IST

ಹುಬ್ಬಳ್ಳಿ: ಕುಸುಗಲ್‌ ರಸ್ತೆಯಲ್ಲಿರುವಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ ಫೆ. 26ರಂದು ನಗರದ ಟ್ವಿನ್‌ ಸಿಟಿ ಸ್ಪೋರ್ಟ್ಸ್ ಸಂಸ್ಥೆ ವತಿಯಿಂದ ಬಾಕ್ಸ್‌ ಕ್ರಿಕೆಟ್‌ ಸರಣಿ ಆಯೋಜಿಸಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಇಮ್ರಾನ್‌ ಖಾನ್‌ ‘ಸೌಹಾರ್ದತೆಗಾಗಿ ಕ್ರಿಕೆಟ್‌ ಆಯೋಜಿಸಲಾಗಿದೆ. ಸರಣಿಯಲ್ಲಿ ಅವಳಿ ನಗರದ 24 ತಂಡಗಳು ಪೈಪೋಟಿ ನಡೆಸಲಿದ್ದು, ಲೋ ಟೆನಿಸ್‌ ಚೆಂಡಿನಲ್ಲಿ ಪಂದ್ಯಗಳು ಜರುಗಲಿವೆ. ಪ್ರತಿ ಪಂದ್ಯ ತಲಾ ಆರು ಓವರ್‌ ಒಳಗೊಂಡಿರುತ್ತದೆ. ಸರಣಿ ಚಾಂಪಿಯನ್ನರಿಗೆ ₹50 ಸಾವಿರ ಮತ್ತು ರನ್ನರ್ಸ್‌ ಅಪ್‌ ಸ್ಥಾನ ಪಡೆದ ತಂಡಕ್ಕೆ ₹20 ಸಾವಿರ ಬಹುಮಾನ ಹಾಗೂ ಟ್ರೋಫಿ ನಿಗದಿ ಮಾಡಲಾಗಿದೆ’ ಎಂದು ತಿಳಿಸಿದರು. ಸರಣಿ ಶ್ರೇಷ್ಠ ಗೌರವ ₹10 ಸಾವಿರ ನಗದು ಒಳಗೊಂಡಿದೆ.

ಬೆಳಿಗ್ಗೆ 8 ಗಂಟೆಗೆ ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಮಹಾವೀರ ಲಿಂಬ್‌ ಕೇಂದ್ರದ ಮುಖ್ಯಸ್ಥ ಮಹೇಂದ್ರ ಸಿಂಘಿ ಸರಣಿಗೆ ಚಾಲನೆ ನೀಡುವರು.

ADVERTISEMENT

ಸಂಸ್ಥೆ ಪದಾಧಿಕಾರಿಗಳಾದ ಉಜ್ವಲ್ ಸಿಂಘಿ, ಅವಂತ್ ಮಹಾಜನ್, ಕಿರಣ ಮೆಣಸಗಿ, ಚೇತನ ಹಬೀಬ್ ಹಾಗೂ ಅಮಿತ್ ಮಹಾಜನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.