ADVERTISEMENT

ಗಣಪತಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 3 ಮೇ 2022, 5:23 IST
Last Updated 3 ಮೇ 2022, 5:23 IST

ಹುಬ್ಬಳ್ಳಿ:ನಗರದಕುಸುಗಲ್ಲ ರಸ್ತೆಯ ವಸಂತನಗರದ ಯಂತ್ರೋದ್ಧಾರಕ ಆಂಜನೇಯ, ಪಂಪಾಪತಿ ಈಶ್ವರ ಹಾಗೂ ಗಣಪತಿ ದೇವಸ್ಥಾನದಲ್ಲಿ ಗಣಪತಿ ಮೂರ್ತಿಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಮೇ4ರಿಂದ 8ರವರೆಗೆ ಜರುಗಲಿದೆ.

4ರಂದು ಬೆಳಿಗ್ಗೆ 7ಕ್ಕೆ ದೇವರ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, 9ಕ್ಕೆ ಗಣಹೋಮ, ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ. 5ರಂದು ಬೆಳಿಗ್ಗೆ 6ಕ್ಕೆ ನೂತನ ಇಡಗುಂಜಿ ಮೂರ್ತಿಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಪಲಿಮಾರು ಮಠದ ವಿದ್ಯಾಧೀಶ ತೀರ್ಥರಿಂದ ನೆರವೇರಲಿದೆ. ಸಂಜೆ ವೆಂಕಟೇಶಾಚಾರ್ಯ ಜಹಗೀರದಾರ ಅವರಿಂದ ಪ್ರವಚನ ನಡೆಯಲಿದೆ.

6ರಂದು ಲೋಕ ಕಲ್ಯಾಣಾರ್ಥವಾಗಿ ಮೃತ್ಯುಂಜಯ ಹೋಮ, ಸಂಜೆ 6.30ಕ್ಕೆ ವಸಂತನಗರದ ಮಹಿಳಾ ಮಂಡಳದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 7ರಂದು ಬೆಳಿಗ್ಗೆ ಪೂಜೆ ಅಭಿಷೇಕ, 10ಕ್ಕೆ ಪವಮಾನ ಹೋಮ ಜರುಗಲಿದೆ. ಸಂಜೆ 6.30ಕ್ಕೆ ಆಕಾಶವಾಣಿ ಕಲಾವಿದ ಶ್ರೀಕಾಂತ ಬಾಕಳೆ ಹಾಗೂ ನಾಗಲಕ್ಷ್ಮೀ ಬಾಕಳೆ ಅವರಿಂದ ಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಲಿದೆ.

ADVERTISEMENT

8ರಂದು ಬೆಳಿಗ್ಗೆ 8ಕ್ಕೆ ಸ್ಥಾಪನಾ ಮೂರ್ತಿಗಳಿಗೆ ಏಕಾದಶ ರುದ್ರಾಭಿಷೇಕ ಜರುಗಲಿದೆ. 11ಕ್ಕೆ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಪ್ರಸಾದ ವಿತರಣೆಯಿಂದ ಪ್ರತಿಷ್ಠಾಪನಾ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ ಎಂದು ವಸಂತನಗರದ ದೇವಸ್ಥಾನದ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.