ಧಾರವಾಡದಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಉಣಕಲ್‌ನ ಡಾ.ಗಂಗೂಬಾಯಿ ಹಾನಗಲ್ ಗುರು ಟ್ರಸ್ಟ್ ಸಂಸ್ಥೆಯ ಹಸ್ತಾಂತರ ಪತ್ರವನ್ನು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ ಬೆಟ್ಟಕೋಟೆ ಅವರಿಗೆ ನೀಡಿದರು
ಧಾರವಾಡ: ಹುಬ್ಬಳ್ಳಿಯ ಉಣಕಲ್‌ನ ಡಾ.ಗಂಗೂಬಾಯಿ ಹಾನಗಲ್ ಗುರು ಟ್ರಸ್ಟ್ ಸಂಸ್ಥೆಯನ್ನು ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕಾರ್ಯವ್ಯಾಪ್ತಿಗೆ ಹಸ್ತಾಂತರದ ಪತ್ರವನ್ನು ಸೋಮವಾರ ಕುಲಪತಿ ಪ್ರೊ.ನಾಗೇಶಬೆಟ್ಟಕೋಟೆ ಅವರಿಗೆ ನೀಡಲಾಯಿತು.
ಈ ಟ್ರಸ್ಟ್ ನ ಚರ, ಸ್ಥಿರಾಸ್ತಿ ಮತ್ತ ಕಾರ್ಯಚಟುವಟಿಕೆಗಳನ್ನು ಸಂಗೀತ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸುವಂತೆ ಫೆಬ್ರುವರಿ 28ರಂದು ಸರ್ಕಾರ ಆದೇಶಿಸಿತ್ತು. ಅದರಂತೆ ಟ್ರಸ್ಟ್‌ನ ಆಡಳಿತ ಕಚೇರಿ, 36 ವಿದ್ಯಾರ್ಥಿ ವಸತಿ ಕೊಠಡಿಗಳು, ಆರು ಗುರು ಮನೆ, ಆರು ಸ್ಟೂಡೆಂಟ್ ಹೌಸ್ ಬ್ಲಕ್, ನಾಲ್ಕು ಫ್ಯಾಕಲ್ಟಿ ಹೌಸ್, ಎರಡು ಅತಿಥಿ ಗೃಹ ಹಾಘೂ ಒಂದು ಕ್ಯಾಂಟೀನ್ ಬ್ಲಾಕ್ ಕಟ್ಟಡಗಳ ದಾಖಲೆ ಸಹಿತ ಎಲ್ಲ ಆಸ್ತಿ, ಕಾರ್ಯಚಟುವಟಿಕೆ ದಾಖಲೆಗಳನ್ನು ಸಂಗೀತ ವಿಶ್ವವಿದ್ಯಾಲಯ ಕಾರ್ಯವ್ಯಾಪ್ತಿಗೆ ವಹಿಸಲಾಗಿದೆ ಎಂದು ಹಸ್ತಾಂತರ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಧಾರವಾಡ ಜಿಲ್ಲಾಧಿಕಾರಿ ಮತ್ತು ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಸಹಿ ಹಾಕಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.