ADVERTISEMENT

‘ಕಪಾಳಕ್ಕೆ ಹೊಡೆಯುತ್ತಿದ್ದೆ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 17:16 IST
Last Updated 15 ಏಪ್ರಿಲ್ 2019, 17:16 IST

ಹುಬ್ಬಳ್ಳಿ: ‘ಲೋಕಸಭೆಯಲ್ಲಿ ಅಧಿಕೃತ ಸ್ಥಾನಮಾನ ಇಲ್ಲದ ಪ್ರತಿಪಕ್ಷ ನಾಯಕನ ಸ್ಥಾನವನ್ನು ಕಾಂಗ್ರೆಸ್‌ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿತ್ತು. ಅದೇ ಸ್ಥಾನಕ್ಕೆ ನನ್ನನ್ನು ಕೇಳಿದ್ದರೆ, ಕಪಾಳಕ್ಕೆ ಹೊಡೆಯುತ್ತಿದ್ದೆ’ ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಹೇಳಿದರು.

ಖರ್ಗೆ ಅವರನ್ನೇ ಒಮ್ಮೆ ಪ್ರತಿಪಕ್ಷ ನಾಯಕನಾಗಿರುವ ಬಗ್ಗೆ ಕೇಳಿದಾಗ, ‘ನಾ ಘೋಡಾ ಹೈ, ನಾ ಗಾಡಿ ಹೈ ನಾಮಕಾವಸ್ತೆ’ (ಇದಕ್ಕೆ ಕುದುರೆಯೂ ಇಲ್ಲ, ಗಾಡಿಯೂ ಇಲ್ಲ ಹೆಸರಿಗೆ ಮಾತ್ರ ಇದೆ) ಎಂದಿದ್ದರು.

ಅಧಿಕೃತ ಸ್ಥಾನಮಾನ ಇದ್ದಿದ್ದರೆ, ಆ ಸ್ಥಾನವನ್ನು ಪಕ್ಷವು ಖರ್ಗೆ ಅವರಿಗೆ ಕೊಡುತ್ತಿರಲಿಲ್ಲ’ ಎಂದು ಟೀಕಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.