ಕುಂದಗೋಳ: ಶಾಸಕ ಎಂ.ಆರ್.ಪಾಟೀಲ ವಿರೋಧ ಪಕ್ಷದಲ್ಲಿದ್ದರೂ ಕ್ರೀಯಾಶೀಲರಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲ್ಲೂಕಿನ ಗುರುವಿನಹಳ್ಳಿ, ಮಳಲಿ, ಕುಂಕೂರ ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಸಾಕಷ್ಟು ಅನುದಾನ ಬರುತ್ತಿದ್ದು ಅದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮೀಣ ಅಭಿವೃದ್ದಿ ಮಾಡಲು ಮುಂದಾಗಬೇಕು. ಹಳೆ ಕಲ್ಲು ಹೊಸ ಬಿಲ್ ಎಂಬಂತೆ ಕಾರ್ಯ ಆಗಬಾರದು ಎಂದು ಮಾರ್ಮಿಕವಾಗಿ ಹೇಳಿದರು.
‘ಸರ್ಕಾರಿ ಶಾಲೆಗಳಲ್ಲಿ ಕಲಿತವರು ಇಂದು ಅನೇಕ ರಂಗಗಳಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ನಾನು ಸಹ ಸರ್ಕಾರಿ ಶಾಲೆಯಲ್ಲಿ ಕಲಿತಿದ್ದು, ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸ್ಮಾರ್ಟ ಕ್ಲಾಸ್, ಲ್ಯಾಬ್, ಶೌಚಾಲಯ ನಿರ್ಮಿಸಿದ್ದು ಅವುಗಳನ್ನು ಉಪಯೋಗಿಸದೆ ನಿಷ್ಕ್ರೀಯ ಮಾಡುತ್ತಿರುವುದು ಕಂಡು ಬಂದಿದ್ದು ಸೌಲಭ್ಯಗಳನ್ನು ಮಕ್ಕಳಿಗೆ ಸಮರ್ಪಕವಾಗಿ ಬಳಕೆಯಾಗುವಂತೆ ನಿಗಾ ವಹಿಸಬೇಕು’ ಎಂದರು.
ಕೇಂದ್ರ ರಸ್ತೆ ನಿಧಿಯಿಂದ ₹123 ಕೋಟಿ, ಗ್ರಾಮ ಸಡಕ್ ಯೋಜನೆಯಲ್ಲಿ ₹88 ಕೋಟಿ ಮೂಲಕ ರಸ್ತೆ ನಿರ್ಮಾಣ, ಸಂಸದರ ನಿಧಿಯಿಂದ ₹11 ಕೋಟಿಯಲ್ಲಿ ಕಾಮಗಾರಿಗಳು, ಸಿ.ಎಸ್.ಆರ್ ಫಂಡ್‌ನಲ್ಲಿ 354 ಶಾಲಾ ಕೊಠಡಿ, ವಿವೇಕ ಯೋಜನೆಯಲ್ಲಿ 800 ಶಾಲಾ ಕೊಠಡಿ, ಜಲಧಾರಾ ಯೋಜನೆಗೆ ₹1,042 ಕೋಟಿ ನೀಡಿಲಾಗಿದೆ. ಸರ್ಕಾರಿ ಶಾಲೆಗಳಿಗೆ 31 ಸಾವಿರ ಡೆಸ್ಕ್‌ಗಳನ್ನು ಇದುವರೆಗೆ ನಿಡಲಾಗಿದೆ ಎಂದು ಹೇಳಿದರು.
ಶಾಸಕ ಎಂ.ಆರ್.ಪಾಟೀಲ ಮಾತನಾಡಿ, ‘ನಮ್ಮ ಭಾಗದ ಸಂಸದರು ನಮ್ಮ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನಗಳನ್ನು ದೊರಕಿಸಿ ಕೊಡುತ್ತಾ ಬಂದಿದ್ದು, ಇಂದು ಅವರ ಸಹಕಾರದಿಂದ ಗುರುವಿನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನೂತನ ಕಾರ್ಯಾಲಯ, ಅಂಗನವಾಡಿ ಕೇಂದ್ರ, ಫಕ್ಕಿರೇಶ್ವರ ಮಠದ ಗ್ರಾಮೀಣ ಉಗ್ರಾಣ, ಹಿರಿಯ ಪ್ರಾಥಮಿಕ ಶಾಲೆಯ ಭೋಜನಾಲಯ, ಮಳಲಿ ಗ್ರಾಮದಲ್ಲಿ ಸಿ.ಆರ್.ಐ.ಎಫ್ ಯೋಜನೆಯಡಿ ಗುರುವಿನಹಳ್ಳಿ-ಮಳಲಿ-ಎನ್.ಎಚ್ 4ವರೆಗೆ ₹330 ಲಕ್ಷ ಅನುದಾನದ ರಸ್ತೆ ಕಾಮಗಾರಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ಕಾಮಗಾರಿ, ಕುಂಕೂರ ಗ್ರಾಮದಲ್ಲಿ ಸಿ.ಎಸ್.ಆರ್ ಫಂಡನಲ್ಲಿ 2 ಶಾಲಾ ಕೊಠಡಿಗಳ ಉದ್ಘಾಟಿಸಲಾಗಿದೆ’ ಎಂದರು.
ಶಿರಹಟ್ಟಿ ಮಠದ ಪಕೀರ ಸಿದ್ದರಾಮ ಸ್ವಾಮೀಜಿ, ತಿರುಮಲಕೊಪ್ಪದ ದಾನಯ್ಯ ದೇವರು ಕುಂದಗೋಳ ಕಲ್ಯಾಣಾಪುರ ಮಠದ ಬಸವಣ್ಣಅಜ್ಜನವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜನಾಥ ಬುದಪ್ಪನವರ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ನಮ್ಮ ಅಧಿಕಾರದ ಅವಧಿಯಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ, ಗ್ರಾಮದ ಮೂಲ ಸೌಕರ್ಯ ರಸ್ತೆ ಚರಂಡಿ ಶಾಲೆಗಳಿಗೆ ಬಣ್ಣದರ್ಪಣೆ ಡೆಸ್ಕ್, ಕೊಠಡಿ, ಭೋಜನಾಲಯ ಇನ್ನು ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಎಂ.ಆರ್.ಪಾಟೀಲ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹಕಾರದೊಂದಿಗೆ ಪ್ರಾಮಾಣಿಕ ಕೆಲಸ ಮಾಡಲಾಗುದೆ ಎಂದರು.
ಈ ಸಂದರ್ಭದಲ್ಲಿ ಈರಣ್ಣ ಜಡಿ,ನಾಗನೌಡ ಸಾತ್ಮಾರ, ಮಂಜುನಾಥ ಬುದಪ್ಪನವರ, ಎನ್.ಎನ್.ಪಾಟೀಲ,ಪಿ.ವಾಯ್.ಹಿರೇಗೌಡ್ರ,ಪ್ರಕಾಶ ಕುಬಿಹಾಳ, ಭರಮಪ್ಪ ಮುಗಳಿ, ಶಂಕರಗೌಡ ಮುದಿಗೌಡ್ರ,ದೇವಿಂದ್ರಪ್ಪ ಇಚ್ಚಂಗಿ,ಗುರು ಪಾಟೀಲ, ಎಮ್.ಪಿ.ಬಡಿಗೇರ, ಮಂಜುನಾಥ ಪಾಟೀಲ, ಕಲ್ಲಪ್ಪ ಸಂಶಿ, ಗುಳಪ್ಪ ಕಳ್ಳಿಮನಿ, ಸಿದ್ದಲಿಂಗ ಹಾದಿಮನಿ, ತಹಶಿಲ್ದಾರ ರಾಜು ಮಾವರಕರ, ತಾ.ಪಂ ಇ.ಓ ಜಗದೀಶ ಕಮ್ಮಾರ, ಸಿ.ಪಿ.ಐ ಶಿವಾನಂದ ಅಂಬಿಗೇರ ಮತ್ತಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.