ಧಾರವಾಡ: ‘ಕಡಲೆಕಾಳಿಗೆ ಕ್ವಿಂಟಲ್‍ಗೆ ಕನಿಷ್ಠ ₹10 ಸಾವಿರ ಬೆಂಬಲ ನಿಗದಿಪಡಿಸಬೇಕು’ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡ್ರ ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೆಸರು, ಉದ್ದು, ಸೋಯಾಬಿನ್, ಶೇಂಗಾ, ಹತ್ತಿಗೆ ಕ್ವಿಂಟಲ್‌ಗೆ ₹10 ಸಾವಿರ, ಕಬ್ಬು, ಈರುಳ್ಳಿ, ಮುಸುಕಿನ ಜೋಳ ಕ್ವಿಂಟಲ್‌ಗೆ ₹5 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.
‘ರೈತರ ಸಾಲ ಮನ್ನಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ರೈತರಿಗೆ ವಾರ್ಷಿಕ 1 ಬಡ್ಡಿ ದರದಲ್ಲಿ ₹10 ಲಕ್ಷದವರೆಗೆ ಸಾಲ ಒದಗಿಸಬೇಕು. 2023ರ ಹಿಂಗಾರು ಬೆಳೆ ವಿಮೆಯನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತರಿಗೆ 2 ಸಾವಿರ ಲೀಟರ್‌ವರೆಗೆ ಅರ್ಧ ಬೆಲೆಯಲ್ಲಿ ಡೀಸೆಲ್ ನೀಡಬೇಕು’ ಎಂದು ಕೋರಿದರು.
ರಾಚಯ್ಯ, ಮುತ್ತು ಮದ್ನಿ, ಚಂದುಗೌಡ ಬಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.