
ಪ್ರಜಾವಾಣಿ ವಾರ್ತೆ
ಧಾರವಾಡ: ಅಂಡಮಾನ್–ನಿಕೋಬಾರ್‌ಗೆ ಪ್ರವಾಸ ತೆರಳಿದ್ದ ಕೆಸಿಡಿ ಕಾಲೇಜಿನ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಎಸ್.ಅನ್ನಪೂರ್ಣ (50) ಶನಿವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ಧಾರೆ.
ಕುಟುಂಬಸಮೇತ ಪ್ರವಾಸಕ್ಕೆ ತೆರಳಿದ್ದ ಅವರು ಪೋರ್ಟ್‌ಬ್ಲೇರ್‌ನಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತಿ ಪ್ರೊ.ಕಿರಣಕುಮಾರ ಕೋಲ್ಕಾರ್, ಪುತ್ರ, ಪುತ್ರಿ ಇದ್ದಾರೆ.
ಅನ್ನಪೂರ್ಣ ಅವರು ಕೆಸಿಡಿ ಕಾಲೇಜಿನ ಕಾವೇರಿ ಹಾಸ್ಟೆಲ್ ನಿಲಯಪಾಲಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಅವರು ಬೆಳಗಾವಿ ಜಿಲ್ಲೆಯ ಮಾವಿನಕಟ್ಟೆ ಗ್ರಾಮದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.